ಸೈರಸ್ ಮಿಸ್ತ್ರಿ ಕಂಪನಿಯ ಹಿತಾಸಕ್ತಿಗೆ ಧಕ್ಕೆ ತಂದಿದ್ದರೆ?
ಸೈರಸ್ ಮಿಸ್ತ್ರಿ ಟಾಟಾ ಸ್ಟೀಲ್ ಕಂಪನಿಯ ಹಿತಾಸಕ್ತಿಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದರು ಎನ್ನಲಾಗಿದೆ.
ನವದೆಹಲಿ (ಅ.25): ಟಾಟಾ ಸಮೂಹ ಸಂಸ್ಥೆಯಿಂದ ಹೊರಬೀಳಲು ಕಾರಣವೇನು ಎಂಬುದು ರತನ್ ಟಾಟಾ ಆಪ್ತ ಮೂಲಗಳಿಂದ ಹೊರ ಬಿದ್ದಿದೆ.
ಸೈರಸ್ ಮಿಸ್ತ್ರಿ ಟಾಟಾ ಸ್ಟೀಲ್ ಕಂಪನಿಯ ಹಿತಾಸಕ್ತಿಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದರು ಎಂದುಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಟಾಟಾ ಕುಟುಂಬಕ್ಕೆ ಸೇರದ ಚೇರ್ ಮನ್ ಆಗಿರುವ ಮೊದಲ ವ್ಯಕ್ತಿ ಸೈರಸ್ ಮಿಸ್ತ್ರಿ. ಸುಮಾರು 100 ಕ್ಕೂ ಹೆಚ್ಚು ದೇಶಗಳಲ್ಲಿ ಕಂಪನಿಯನ್ನು ಹೊಂದಿದ್ದು 103 ಬಿಲಿಯನ್ ಡಾಲರ್ ವಹಿವಾಟನ್ನು ಹೊಂದಿದ್ದ ಟಾಟಾ ಕಂಪನಿಯಿಂದ ಮಿಸ್ತ್ರಿ ಆಶ್ಚರ್ಯಕರವಾಗಿ ಹೊರ ಬಿದ್ದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.