ಪರೀಕ್ಷೆ ಯೇ ಜೀವನವಲ್ಲ, ಜೀವನ ಪರೀಕ್ಷೆಯೂ ಅಲ್ಲ ಆರಾಮಾಗಿರಿ; ವಿದ್ಯಾರ್ಥಿಗಳೇ ನಿಮ್ಮ ತಯಾರಿ ಹೀಗಿರಲಿ

First Published 25, Mar 2018, 8:09 PM IST
Exam Preparation tips
Highlights

ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ಬಹಳ ಮುಖ್ಯವಾದ ಘಟ್ಟ! ನಿಜ. ಆದರೆ ಪರೀಕ್ಷೆ ಎನ್ನುವುದು ಒಂದು ಶಿಕ್ಷೆಯಂತಾಗಬಾರದು. ಬದಲಿಗೆ ಅದು ಸಂಭ್ರಮದ ಕಾಲವಾಗಬೇಕು. ವಿದ್ಯಾರ್ಥಿಗಳು ಈ ಘಟ್ಟವನ್ನು ಯಶಸ್ವಿಯಾಗಿ ಕ್ರಮಿಸಬೇಕಾದರೆ, ವಿದ್ಯಾರ್ಥಿಗಳ ಪ್ರಯತ್ನ ಎಷ್ಟು ಮುಖ್ಯವೋ ಅಷ್ಟೇ ಹೆತ್ತವರ ಹಾಗೂ ಅಧ್ಯಾಪಕರ ಒತ್ತಾಸೆ, ಬೆಂಬಲ, ಪ್ರೋತ್ಸಾಹಗಳೂ ಮುಖ್ಯ! ವಿದ್ಯಾರ್ಥಿ ಎಷ್ಟೇ ಬುದ್ಧಿವಂತನಾಗಿರಲಿ ಅಥವಾದಡ್ಡನಾಗಿರಲಿ, ಅವನ ಮನಸ್ಸನ್ನು ಮುದುಡಿಸದೇ ಅರಳಿಸುವ ಎಲ್ಲ ಪ್ರಯತ್ನಗಳನ್ನು ಹೆತ್ತವರು ಹಾಗೂ ಅಧ್ಯಾಪಕರು ಮಾಡಿದರೆ, ಪರೀಕ್ಷೆಯೆನ್ನುವುದು ಎಲ್ಲ ರೀತಿಯ ಆತಂಕಗಳಿಂದ ದೂರವಾಗಿ ಒಂದು ಹಬ್ಬವಾಗುತ್ತದೆ.

ಬೆಂಗಳೂರು (ಮಾ.25):  ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ಬಹಳ ಮುಖ್ಯವಾದ ಘಟ್ಟ! ನಿಜ. ಆದರೆ ಪರೀಕ್ಷೆ ಎನ್ನುವುದು ಒಂದು ಶಿಕ್ಷೆಯಂತಾಗಬಾರದು. ಬದಲಿಗೆ ಅದು ಸಂಭ್ರಮದ ಕಾಲವಾಗಬೇಕು. ವಿದ್ಯಾರ್ಥಿಗಳು ಈ ಘಟ್ಟವನ್ನು ಯಶಸ್ವಿಯಾಗಿ ಕ್ರಮಿಸಬೇಕಾದರೆ, ವಿದ್ಯಾರ್ಥಿಗಳ ಪ್ರಯತ್ನ ಎಷ್ಟು ಮುಖ್ಯವೋ ಅಷ್ಟೇ ಹೆತ್ತವರ ಹಾಗೂ ಅಧ್ಯಾಪಕರ ಒತ್ತಾಸೆ, ಬೆಂಬಲ, ಪ್ರೋತ್ಸಾಹಗಳೂ ಮುಖ್ಯ! ವಿದ್ಯಾರ್ಥಿ ಎಷ್ಟೇ ಬುದ್ಧಿವಂತನಾಗಿರಲಿ ಅಥವಾದಡ್ಡನಾಗಿರಲಿ, ಅವನ ಮನಸ್ಸನ್ನು ಮುದುಡಿಸದೇ ಅರಳಿಸುವ ಎಲ್ಲ ಪ್ರಯತ್ನಗಳನ್ನು ಹೆತ್ತವರು ಹಾಗೂ ಅಧ್ಯಾಪಕರು ಮಾಡಿದರೆ, ಪರೀಕ್ಷೆಯೆನ್ನುವುದು ಎಲ್ಲ ರೀತಿಯ ಆತಂಕಗಳಿಂದ ದೂರವಾಗಿ ಒಂದು ಹಬ್ಬವಾಗುತ್ತದೆ.

ಪ್ರೀತಿಯ ವಿದ್ಯಾರ್ಥಿಗಳೇ! ಪರೀಕ್ಷಾ ದಿನ ಬಹಳ ಮುಖ್ಯವಾದ ದಿನ. ಇಡೀ ವರ್ಷದ ಶ್ರಮ ಫಲ ನೀಡುವ ದಿನ. ಹಾಗಾಗಿ ಪರೀಕ್ಷೆ ನಡೆಯುವ ದಿನದಂದು ನೀವು ಉತ್ಸುಕರಾಗಿರಬೇಕು, ಲವಲವಿಕೆ ಹಾಗೂ ಚೈತನ್ಯದಿಂದ ಕೂಡಿರಬೇಕು.ಪ್ರಫುಲ್ಲವಾಗಿರಬೇಕು. ಆಗ ನೀವು ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರಿಸಬಹುದು. ಒಂದು ವೇಳೆ ಪರೀಕ್ಷಾ ದಿನ ನಿಮ್ಮ ‘ಮೂಡ್’ ಚೆನ್ನಾಗಿಲ್ಲವೆಂದರೆ, ಇಡೀ ವರ್ಷ ಪೂರ್ಣ ನೀವು ಓದಿದ ಓದು ವ್ಯರ್ಥವಾಗಬಹುದು. ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಗೆತಕ್ಕ ಹಾಗೆ ಉತ್ತರವನ್ನು ಬರೆಯಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳಾದ ನೀವು ತಮ್ಮ ಶರೀರ ಹಾಗೂ ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಪರೀಕ್ಷಾ ದಿನಗಳಲ್ಲಿ ಹಾಗೂ ಪರೀಕ್ಷಾಸಮಯದಲ್ಲಿ ನೀವು ಕೆಲವು ಶಿಸ್ತನ್ನು ಪಾಲಿಸುವುದು ಒಳ್ಳೆಯದು. ಈ ಅವಧಿಯಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವುದರ ಸ್ಪಷ್ಟ ಪರಿಕಲ್ಪನೆಯಿರಬೇಕು.

ಪರೀಕ್ಷಾ ಸಾಮಾಗ್ರಿಗಳ ಬಗ್ಗೆ ಎಚ್ಚರಿಕೆ
* ನಾಳೆ ಬೆಳಿಗ್ಗೆ ಪರೀಕ್ಷೆ ಇದೆ ಎಂದರೆ ಹಿಂದಿನ ರಾತ್ರಿಯೇ ಸಿದ್ಧತೆಗಳನ್ನು ನಡೆಸಬೇಕು.
* ಮೊದಲು ನಿಮ್ಮ ‘ಹಾಲ್ ಟಿಕೆಟ್’ ತೆಗೆದಿಟ್ಟುಕೊಳ್ಳಿ. (ಹಾಲ್ ಟಿಕೆಟ್ಟಿನ ಎರಡು ನೆರಳುಪ್ರತಿ (ಫೋಟೋಕಾಫಿ)ಮಾಡಿಟ್ಟುಕೊಳ್ಳುವುದು ಒಳ್ಳೆಯದು) ಹಾಲ್ ಟಿಕೆಟನ್ನು ಯಾವ ಕಾರಣಕ್ಕೂ ಲ್ಯಾಮಿನೇಶನ್ ಮಾಡಿಸಲು ಹೋಗಬೇಡಿ.
* ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು ನಿಮ್ಮ ಜಾಮಿಟ್ರಿ ಬಾಕ್ಸ್ ಒಳಗೆ ಇಟ್ಟುಕೊಳ್ಳಿ. ಅಕಸ್ಮಾತ್ ನಿಮ್ಮ ಪ್ರವೇಶಪತ್ರಕಳೆದುಹೋದರೆ, ತಾತ್ಕಾಲಿಕ ಪ್ರವೇಶಪತ್ರವನ್ನು ನೀಡಲು ಈ ಭಾವಚಿತ್ರಗಳು ನೆರವಾಗುತ್ತವೆ.
* ಪರೀಕ್ಷಾ ಕೇಂದ್ರ ಎಲ್ಲಿದೆ ಎನ್ನುವುದನ್ನು  ಖಚಿತಪಡಿಸಿಕೊಳ್ಳಿ. ನಿಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಎಷ್ಟು ದೂರವಿದೆ? ಅಲ್ಲಿಗೆಹೋಗಲು ಯಾವ ಯಾವ ಸಂಚಾರ ಸಾಧನಗಳಿವೆ ಎನ್ನುವುದನ್ನು ತಿಳಿದುಕೊಳ್ಳಿ. ‘ಗೂಗಲ್ ಮ್ಯಾಪ್’ ಸಹಾಯದಿಂದಲೂ ದಾರಿಯನ್ನು ತಿಳಿದುಕೊಳ್ಳಬಹುದು. ಪರೀಕ್ಷಾ ಕೇಂದ್ರಕ್ಕೆ ಹೇಗೆ ಹೋಗುತ್ತೀರಿ (ಸಂಚಾರ ಮಾಧ್ಯಮ) ಎನ್ನುವುದನ್ನು ನಿಮ್ಮಹೆತ್ತವರ ಜೊತೆಯಲ್ಲಿ ಚರ್ಚಿಸಿ ತೀರ್ಮಾನಿಸಿ.
ಪರೀಕ್ಷಾ ವೇಳಾ ಪಟ್ಟಿಯನ್ನು ಗಮನಿಸಿ. ನಾಳೆ ಯಾವ ಪರೀಕ್ಷೆ ಇದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಅನೇಕ ವಿದ್ಯಾರ್ಥಿಗಳುಸಮಾಜ ಶಾಸ್ತ್ರ ಪರೀಕ್ಷೆಯಿದ್ದ ದಿನ ವಿಜ್ಞಾನವನ್ನು ಓದಿಕೊಂಡು ಹೋದ ಉದಾಹರಣೆಗಳಿವೆ. ಹಾಗಾಗಿ ನಾಳೆ ಯಾವ ಪರೀಕ್ಷೆ ಇದೆಎನ್ನುವುದನ್ನು ಖಚಿತಪಡಿಸಿಕೊಳ್ಳಿ.
* ಪರೀಕ್ಷೆಯನ್ನು ಬರೆಯಲು ನಿಮಗೆ ಯಾವ ಯಾವ ವಸ್ತುಗಳು ಬೇಕು ಎನ್ನುವುದನ್ನು ನೋಡಿ ಎತ್ತಿಟ್ಟುಕೊಳ್ಳಿ. ಕನಿಷ್ಟ ಎರಡುಒಳ್ಳೆಯ ನೀಲಿ ಬಣ್ಣದ ಬಾಲ್ ಪೆನ್ ಬೇಕಾಗುತ್ತದೆ. ಈ ಪೆನ್ನುಗಳು ಚೆನ್ನಾಗಿ ಬರೆಯಬೇಕು. ಮೊದಲೇ ಒಂದೆರಡು ಪುಟಬರೆದು ಪೆನ್ನನ್ನು ಪರೀಕ್ಷಿಸಿಕೊಳ್ಳಿ. ಎರಡು ಪೆನ್ಸಿಲ್, ಎರಡು ರಬ್ಬರ್, ಎರಡು ಮೆಂಡರ್ ತೆಗೆದಿಟ್ಟುಕೊಳ್ಳಿ. ಜಾಮಿಟ್ರಿ ಬಾಕ್ಸ್ ಅಥವ ಕಂಪಾಸ್ ಬಾಕ್ಸ್ ತೆಗೆದಿಟ್ಟುಕೊಳ್ಳಿ. ಬಣ್ಣದ ಸ್ಕೆಚ್ ಪೆನ್ನುಗಳನ್ನು ತೆಗೆದಿಟ್ಟುಕೊಳ್ಳಿ. ಮುಖ್ಯವಾಗಿ ನಿಮ್ಮ ಗುರುತಿನ ಚೀಟಿ(ಐಡೆಂಟಿಟಿ ಕಾರ್ಡ್) ಯನ್ನು ತೆಗೆದುಕೊಂಡು ಹೋಗಲು ಮರೆಯದಿರಿ.ಕೈಗಡಿಯಾರವನ್ನು ಎತ್ತಿಟ್ಟುಕೊಳ್ಳಿ. ಪರೀಕ್ಷಾ ದಿನ ಕಟ್ಟಿಕೊಂಡು ಹೋಗಿ.
ಕೇವಲ ಪಕ್ಷಿನೋಟವನ್ನು ಹರಿಸಿ.
* ಪರೀಕ್ಷಾ ದಿನ ಬೆಳಿಗ್ಗೆ ನಿಮ್ಮ ದೈನಂದಿನ ಸಮಯಕ್ಕೆ ಏಳಿ. ಪ್ರಾತಃರ್ವಿಧಿಗಳನ್ನು ಮುಗಿಸಿ. ನಿಮ್ಮ ಪಠ್ಯ ಪುಸ್ತಕ  ಹಾಗೂ ನಿಮ್ಮನೋಟ್ಸ್ ಮುಂತಾದ ಅಧ್ಯಯನ ಸಾಮಾಗ್ರಿಗಳ ಮೇಲೆ ಒಂದು ಪಕ್ಷಿನೋಟವನ್ನು (ಬರ್ಡ್ಸ್ ಐ ವ್ಯೆ = ಗ್ಲಾನ್ಸ್) ಹರಿಸಿ. ಯಾವಪಾಠವನ್ನೂ ನೀವು ಇಡಿಯಾಗಿ ಓದಬೇಕಾಗಿಲ್ಲ. ಆದರೆ ಪ್ರತಿಯೊಂದು ಪಾಠವನ್ನೂ ಗಮನಿಸಿ. ಶೀರ್ಷಿಕೆ, ಉಪಶೀರ್ಷಿಕೆ,ಚಿತ್ರಗಳು, ಪಟ್ಟಿಗಳು, ಸೂತ್ರಗಳು, ಸಮೀಕರಣಗಳು, ಮುಖ್ಯ ಪ್ರಶ್ನೆಗಳು ಹಾಗೂ ವಸ್ತುನಿಷ್ಠ ಪ್ರಶ್ನೆ ಇತ್ಯಾದಿಗಳ ಮೇಲೆ ಒಂದುನೋಟವನ್ನು ಹರಿಸಿ. ಈ ನೋಟ ನಿಮ್ಮ ನೆನಪನ್ನು ಜಾಗೃತಗೊಳಿಸುತ್ತದೆ.
* ಯಾವುದೇ ಉತ್ತರಗಳನ್ನು ಪೂರ್ಣ ಓದಲು ಹೋಗಬೇಡಿ. ಹೀಗೆ ಓದಲು  ಹೋದಾಗ  ಇಡೀ ಪಠ್ಯವನ್ನು ಓದಿ ಮುಗಿಸಲುಸಾಧ್ಯವಾಗುವುದಿಲ್ಲ. ಇದರಿಂದ ನಿಮಗೆ ಅನಗತ್ಯ ಗೊಂದಲವುಂಟಾಗುತ್ತದೆ.ಪರೀಕ್ಷಾ ಕೇಂದಕ್ಕೆ ಪರೀಕ್ಷಾ ಸಾಮಾಗ್ರಿಗಳನ್ನು ಬಿಟ್ಟು ಯಾವುದೇ ಪಠ್ಯ ಪುಸ್ತಕವನ್ನಾಗಲಿ ಅಥವ ನಿಮ್ಮ ನೋಟ್ಸ್’ನನ್ನಾಗಲಿತೆಗೆದುಕೊಂಡು ಹೋಗಬೇಡಿ. ಮೊಬೈಲನ್ನು ಮನೆಯಲ್ಲಿಯೇ ಇಟ್ಟುಹೋಗಿ.

loader