ಮಾಜಿ ಕಂದಾಯ ಸಚಿವ ದುಲೈ ಭುಯಾನ್ ಶಿಕ್ಷೆಗೊಳಗದವರು ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ 

ರಾಂಚಿ[ಜೂ.22]: ಆದಾಯ ಮೀರಿದ ಆಸ್ತಿ ಹೊಂದಿದ ಮೇಲೆ ಜಾರ್ಖಂಡ್‌ನ ಮಾಜಿ ಸಚಿವರೊಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಿದೆ.

ಮಾಜಿ ಕಂದಾಯ ಸಚಿವ ದುಲೈ ಭುಯಾನ್ ಶಿಕ್ಷೆಗೊಳಗದವರು. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಕೋರ್ಟ್ ಆದೇಶಿಸಿದೆ.

ಭುಯಾನ್ ಅವರು ಮಧು ಕೋಡ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಅಕ್ರಮವಾಗಿ 1.3 ಕೋಟಿ ಹೊಂದಿದ್ದರು ಎಂದು ಸಿಬಿಐ ಭುಯಾನ್‌ ವಿರುದ್ಧ 2013ರಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವಂತೆ ಜಾರ್ಖಂಡ್‌ ಹೈಕೋರ್ಟ್ ಆದೇಶಿಸಿತ್ತು.