ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಪುತ್ರ ಮಾಜಿ ಶಾಸಕ ಕಾಂಗ್ರೆಸ್ ತೊರೆದು ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. 


ಗಾಂಧಿನಗರ: ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಹ ವಘೇಲರ ಮಗ, ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಮಹೇಂದ್ರಸಿಂಹ ವಘೇಲಾ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

ಒಂದು ವರ್ಷದ ಹಿಂದೆಯೇ ಕಾಂಗ್ರೆಸ್ ತೊರೆದಿದ್ದ ಮಹೇಂದ್ರಸಿಂಹ ಈಗ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. 

2017ರ ಗುಜರಾತ್ ಚುನಾವಣೆಗೂ ಮುನ್ನಾ ಕಾಂಗ್ರೆಸ್ ಬಂಡುಕೋರರ ನೇತೃತ್ವ ವಹಿಸಿ 13 ಶಾಸಕರು ಪಕ್ಷ ತೊರೆಯಲು ಶಂಕರ್‌ಸಿಂಹ ಕಾರಣರಾಗಿದ್ದರು. 2017ರ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ವಿರುದ್ಧ ಮಹೇಂದ್ರಸಿಂಹ ಮತ ದಾನ ಮಾಡಿದ್ದರು.