ಇಟಾನಗರ (ಫೆ. 22): ದಿಢೀರ್‌ ರಾಜಕೀಯ ಬೆಳವಣಿಗೆಯೊಂದರಲ್ಲಿ, 23 ವರ್ಷಗಳ ಕಾಲ ಅರುಣಾಚಲಪ್ರದೇಶ ಮುಖ್ಯಮಂತ್ರಿಯಾಗಿದ್ದ ಗೆಗಾಂಗ್‌ ಅಪಾಂಗ್‌ ಅವರು ಎಚ್‌.ಡಿ. ದೇವೇಗೌಡ ನೇತೃತ್ವದ ಜೆಡಿಎಸ್‌ಗೆ ಗುರುವಾರ ಸೇರ್ಪಡೆಯಾಗಿದ್ದಾರೆ.

ಪೂರ್ವ ಸಿಯಾಂಗ್‌ ಜಿಲ್ಲೆಯ ಪಾಸಿಘಾಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವೇಗೌಡರ ಸಮ್ಮುಖ ಅಪಾಂಗ್‌ ಜೆಡಿಎಸ್‌ಗೆ ಸೇರ್ಪಡೆಯಾದರು. ಜೆಡಿಎಸ್‌ಗೆ ಜಾತ್ಯತೀತ ನೋಟ ಇದೆ. ಹೀಗಾಗಿ ಜತೆಯಾಗಿರಲು ನಿರ್ಧರಿಸಿದ್ದೇನೆ ಎಂದು ಅಪಾಂಗ್‌ ಸುದ್ದಿಗಾರರಿಗೆ ತಿಳಿಸಿದರು.

7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಪಾಂಗ್‌ ಅವರು ಜ.15ರಂದು ಬಿಜೆಪಿ ತೊರೆದಿದ್ದರು. ಜ.19 ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ಮಮತಾ ಬ್ಯಾನರ್ಜಿ ರಾರ‍ಯಲಿಯಲ್ಲೂ ಕಾಣಿಸಿಕೊಂಡಿದ್ದರು.