ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಆಗಿತ್ತಂತೆ!?

EVM hack: Karnataka Congress Leaders to approach High Court
Highlights

ಮತ್ತೆ ಇವಿಎಂ ಮತ ಯಂತ್ರ  ವಿಚಾರ ಸುದ್ದಿ ಮಾಡುತ್ತಿದೆ.  ಈ ಬಾರಿ ಇಬ್ಬರು ಮಾಜಿ ಶಾಸಕರು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಬೆಂಗಳೂರು[ಜೂ.30]  ವಿಧಾನಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.  ಕೆ.ಆರ್. ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ,ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಕೋರ್ಟ್ ಮೊರೆ ಹೋಗಿದ್ದಾರೆ.

ಚುನಾವಣೆಯಲ್ಲಿ ಇವಿಎಂ ಮಿಷನ್ ಹ್ಯಾಕ್ ಮಾಡಲಾಗಿದೆ ಅನ್ನೊ ಅನುಮಾನ ಇದೆ. ಸೂಕ್ತ ತನಿಖೆ ನಡೆಸುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ಮತದಾರರ ಒಲವು ನಮ್ಮ ಮೇಲೆ ಹೆಚ್ಚಿದ್ದರೂ ನಾವು ಸೋತಿದ್ದೇವೆ. ಕೂಡಲೇ ಇವಿಎಂ ಯಂತ್ರ ಹ್ಯಾಕ್ ಆಗಿರೋ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ನಂತರದಲ್ಲಿ ಇಂಥಹದೆ ಆರೋಪ ಕೇಳಿ ಬಂದಿತ್ತು. ಇದಾದ ಮೇಲೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ದೋಷ ಕಂಡು ಹಿಡಿದು ತಿಳಿಸಲು ಸವಾಲು ಹಾಕಿತ್ತು. ಆದರೆ ಯಾವ ಪಕ್ಷಗಳು ಆಯೋಗದ ಸವಾಲು ಸ್ವೀಕರಿಸಿರಲಿಲ್ಲ.


 

loader