ಮುಂದಿನ ದಿನಗಳಲ್ಲಿ ಆತಂಕವಾದಿಗಳ ವಿರುದ್ಧ ಹೋರಾಡಲು ಹಿಂದೂಗಳು ಖಡ್ಗ ಹಿಡಿಯಬೇಕಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಹಿಂದೂವೂ ಕೈಯಲ್ಲಿ ಖಡ್ಗ ಹಿಡಿದು ಹೋರಾಟ ನಡೆಸಬೇಕು ಎಂದು ತೆಲಂಗಾಣದ ಶಾಸಕ ರಾಜಾಸಿಂಗ್ ಠಾಕೂರ್ ತಿಳಿಸಿದ್ದಾರೆ.
ಯಾದಗಿರಿ(ಡಿ.16): ಮುಂದಿನ ದಿನಗಳಲ್ಲಿ ಆತಂಕವಾದಿಗಳ ವಿರುದ್ಧ ಹೋರಾಡಲು ಹಿಂದೂಗಳು ಖಡ್ಗ ಹಿಡಿಯಬೇಕಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಹಿಂದೂವೂ ಕೈಯಲ್ಲಿ ಖಡ್ಗ ಹಿಡಿದು ಹೋರಾಟ ನಡೆಸಬೇಕು ಎಂದು ತೆಲಂಗಾಣದ ಶಾಸಕ ರಾಜಾಸಿಂಗ್ ಠಾಕೂರ್ ತಿಳಿಸಿದ್ದಾರೆ.
ನಗರದಲ್ಲಿ ಡಿ.12ರಂದು ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ವಿರಾಟ್ ಸಮಾವೇಶದಲ್ಲಿ ರಾಜಾಸಿಂಗ್, ಇಲ್ಲಿ ನೆರೆದಿರುವ ಎಷ್ಟು ಮಂದಿ ಕಾಳಗಕ್ಕೆ ಸಿದ್ಧರಾಗಿದ್ದೀರ ಎಂದು ಪ್ರಶ್ನಿಸಿದ್ದಾರೆ. ಸಮಾವೇಶದಲ್ಲಿ ಒಬ್ಬನ ಕೈಯಲ್ಲಿ ಮಾತ್ರ ಖಡ್ಗ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಹಿಂದೂವಿನ ಕೈಯಲ್ಲೂ ಖಡ್ಗಗಳಿರಬೇಕು ಎಂದು ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಓರ್ವ ದೇಶದ್ರೋಹಿ ಮನೆ ಮನೆಯಲ್ಲೂ ಅಫಜಲ್ ಹುಟ್ಟಬೇಕು ಎನ್ನುತ್ತಾನೆ. ಇಂತಹ ಎಷ್ಟೇ ಅಫಜಲ್’ಗಳು ಹುಟ್ಟಿಕೊಂಡರೂ ನಾವು ಹತ್ಯೆ ಮಾಡುತ್ತೇವೆ.
ನಿನ್ನೆಯ ಹಿಂದೂಗಳು ಗಾಂಧಿ ರೀತಿಯಲ್ಲಿದ್ದರು. ಆದರೆ, ಇಂದಿನ ಹಿಂದೂಗಳು ಛತ್ರಪತಿ ಶಿವಾಜಿ ರೀತಿಯಂತಿದ್ದಾರೆ ಎಂದಿದ್ದಾರೆ. ಶಾಸಕರ ಈ ರೀತಿಯ ಪ್ರಚೋದನಾಕಾರಿ ಭಾಷಣ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಸ್ವಯಂ ಪ್ರೇರಿತ ದೂರು: ವಿರಾಟ್ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ತೆಲಂಗಾಣ ಶಾಸಕ ರಾಜಾಸಿಂಗ್ ಠಾಕೂರ್, ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್, ಸೇನೆ ರಾಜ್ಯ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಹೈದ್ರಾಬಾದ್ ಕರ್ನಾಟಕ ಭಾಗದ ಅಧ್ಯಕ್ಷ ವಿಜಯ ಪಾಟೀಲ್ ಸೇರಿದಂತೆ ಇತರರ ವಿರುದ್ಧ ಯಾದಗಿರಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.
