Asianet Suvarna News Asianet Suvarna News

ತನ್ನ ಅಂಗರಕ್ಷಕರಿಂದಲೇ ಇಥಿಯೋಪಿಯಾ ಸೇನಾ ಮುಖ್ಯಸ್ಥ ಬಲಿ!

ಇಥಿಯೋಪಿಯಾದ 9 ಸ್ವಾಯತ್ತ ರಾಜ್ಯಗಳ ಪೈಕಿ ಒಂದಾದ ಅಮಹರಾವನ್ನು ತೆಕ್ಕೆಗೆ ತೆಗೆದುಕೊಳ್ಳಲು ಮೆಕೊನೆನ್‌ ಅವರು ದಂಗೆ| ಗಲಭೆ, ತನ್ನ ಅಂಗರಕ್ಷಕರಿಂದಲೇ ಇಥಿಯೋಪಿಯಾ ಸೇನಾ ಮುಖ್ಯಸ್ಥ ಬಲಿ!|

Ethiopia s Army Chief Shot Dead by His Own Bodyguard Hours After Coup Attempt
Author
Bangalore, First Published Jun 24, 2019, 10:28 AM IST

ಅಡ್ಡಿಸ್‌ ಅಬಬ[ಜೂ.24]: ಹಲವು ಸಮಯದಿಂದ ಆಂತರಿಕ ಸಂಘರ್ಷಕ್ಕೆ ಸಿಕ್ಕಿ ನಲುಗಿರುವ ಆಫ್ರಿಕಾದ ಇಥಿಯೋಪಿಯೋದಲ್ಲಿ, ಇದೀಗ ಸೇನಾ ಮುಖ್ಯಸ್ಥರನ್ನೇ ಹತ್ಯೆಗೈಯಲಾಗಿದೆ. ಸೇನಾ ಮುಖ್ಯಸ್ಥ ಸಿಯರೆ ಮೆಕೊನೆನ್‌ ಅವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಇಥಿಯೋಪಿಯಾದ 9 ಸ್ವಾಯತ್ತ ರಾಜ್ಯಗಳ ಪೈಕಿ ಒಂದಾದ ಅಮಹರಾವನ್ನು ತೆಕ್ಕೆಗೆ ತೆಗೆದುಕೊಳ್ಳಲು ಮೆಕೊನೆನ್‌ ಅವರು ದಂಗೆ ನಡೆಸಲು ಸಂಚು ರೂಪಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ದಾಳಿಗೂ ಕೆಲವೇ ಗಂಟೆಗಳ ಮೊದಲು ಅಮಹರಾದ ಅಧ್ಯಕ್ಷ ಅಂಬಚ್ಯೂ ಅವರನ್ನೂ ಗುಂಪೊಂದು ಗುಂಡಿಟ್ಟು ಹತ್ಯೆ ಮಾಡಿದೆ. ಇಥಿಯೋಪಿಯಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅಭಿಯ್‌ ಅಹಮದ್‌ ಭಾರೀ ಪ್ರಮಾಣದಲ್ಲಿ ಸುಧಾರಣಾ ಕ್ರಮಗಳನ್ನು ಘೋಷಿಸಿದ್ದಾರೆ.

ಸೇನೆ ಮತ್ತು ಗುಪ್ತಚರ ವಿಭಾಗದಲ್ಲಿ ಭಾರೀ ಬದಲಾವಣೆ ತಂದಿದ್ದಾರೆ. ಇದಕ್ಕೆ ಭಾರೀ ವಿರೋಧ ಹೊಂದಿರುವ ಸೇನೆಯಲ್ಲಿನ ಕೆಲ ಹಿರಿಯರು ದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios