"ಶೋಭಾ ಕರಂದ್ಲಾಜೆ ಬಿಜೆಪಿ ಯುವ ಮೋರ್ಚಾದ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈಶ್ವರಪ್ಪ ಬೇರೊಂದು ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇದು ಗಂಭೀರವಾಗಿ ಪರಿಗಣಿಸುವ ವಿಚಾರವಲ್ಲ" ಎಂದು ಬಿಎಸ್ವೈ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು(ಮೇ 28): ಕೆಎಸ್ ಈಶ್ವರಪ್ಪ ಬಿಜೆಪಿಯ ಕೋರ್ ಕಮಿಟಿ ಸಭೆಗೆ ಹಾಜರಾಗುವ ಬದಲು ಸಿನಿಮಾ ವೀಕ್ಷಿಸಲು ಹೋದ ಘಟನೆ ವರದಿಯಾಗಿದೆ. ಈಶ್ವರಪ್ಪ ತಮ್ಮ ಕುಟುಂಬಸಮೇತ ಬಾಹುಬಲಿ-2 ಸಿನಿಮಾ ವೀಕ್ಷಿಸಿದರು. ಯಶವಂತಪುರದ ಒರಾಯನ್ ಮಾಲ್'ನಲ್ಲಿರುವ ಪಿವಿಆರ್ ಸಿನಿಮಾಸ್ ಮಲ್ಟಿಪ್ಲೆಕ್ಸ್'ನಲ್ಲಿ ಈಶ್ವರಪ್ಪ ಬಾಹುಬಲಿ ಸಿನಿಮಾ ನೋಡಿದರು. ಇಂದು ನಿಗದಿಯಾಗಿದ್ದ ಬಿಜೆಪಿ ಕೋರ್ ಕಮಿಟಿ ಸಭೆಗೆ ಈಶ್ವರಪ್ಪ ಬರುವ ನಿರೀಕ್ಷೆ ಇತ್ತು. ಇದೇ ವೇಳೆ ಬಿಜೆಪಿ ಸಭೆಗೆ ಶೋಭಾ ಕರಂದ್ಲಾಜೆ ಕೂಡ ಗೈರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ, ಅವರಿಬ್ಬರು ಸಭೆಗೆ ಗೈರಾಗಿರುವುದು ಗಂಭೀರದ ವಿಚಾರವಲ್ಲ ಎಂದು ಘಟನೆಯನ್ನು ತಳ್ಳಿಹಾಕಿದ್ದಾರೆ. "ಶೋಭಾ ಕರಂದ್ಲಾಜೆ ಬಿಜೆಪಿ ಯುವ ಮೋರ್ಚಾದ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈಶ್ವರಪ್ಪ ಬೇರೊಂದು ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇದು ಗಂಭೀರವಾಗಿ ಪರಿಗಣಿಸುವ ವಿಚಾರವಲ್ಲ" ಎಂದು ಬಿಎಸ್ವೈ ಅಭಿಪ್ರಾಯಪಟ್ಟಿದ್ದಾರೆ.
