ಬೆಂಗಳೂರು (ಅ.06): ಬಿಜೆಪಿ ನಾಯಕರಾದ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ತಣ್ಣಗಾದಂತೆ ಕಾಣುತ್ತಿದೆ.
ಇವತ್ತು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ನಾಯಕರ ಜೊತೆ ಬಿಜೆಪಿ ರಾಷ್ಟ್ರೀಯ ಮುಖಂಡ ರಾಮಲಾಲ್ ಕೂಡಾ ಉಪಸ್ಥಿತರಿದ್ದರು.
ಇಂದು ಮಧ್ಯಾಹ್ನ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಹೀಗಾಗಿ ಕೋರ್ ಕಮಿಟಿಗೂ ಉಭಯ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.
ನಿವಾಸದಿಂದ ಹೊರಬಂದ ಬಳಿಕ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ವಿರುದ್ಧವೇ ನಮ್ಮ ಹೋರಾಟ. ಯಡಿಯೂರಪ್ಪ ನವರೇ ನಮ್ಮ ನಾಯಕರು ಅಂತ ಹೇಳಿದ್ದಾರೆ.
