ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ಬಳಿಕ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದು, ಕೆಜೆಪಿಯಿಂದ ಬಂದವರಿಗೆ ಮಣೆ ಹಾಕಿ 20 ವರ್ಷಗಳಿಂದ ಪಕ್ಷದಲ್ಲಿರೋ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಸಹಿ ಸಂಗ್ರಹ ಮಾಡುವ ಮೂಲಕ ಪಕ್ಷದಲ್ಲಿ ಅಶಿಸ್ತು ಉಂಟು ಮಾಡಲು ಹೊರಟವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳೂಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ. 

ಬಾಗಲಕೋಟೆ (ಜ.25): ಸಹಿ ಸಂಗ್ರಹ ಮಾಡುವ ಕ್ರಮ ನಮ್ಮ ಪಕ್ಷದಲ್ಲಿಲ್ಲ, ಅದೊಂದು ಅಶಿಸ್ತು, ಈ ಸಹಿ ಸಂಗ್ರಹಕ್ಕೆ ಬೆಲೆ ಇಲ್ಲ, ಇಂತಹ ಸಹಿ ಸಂಗ್ರಹಕ್ಕೆ ಪ್ರೇರಣೆ ಕೊಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನಮ್ಮ ಪಕ್ಷದಲ್ಲಿ ಸಹಿ ಸಂಗ್ರಹ ವಿಚಾರವಾಗಿ ರಾಜ್ಯ ಉಸ್ತುವಾರಿ ಮುರಳಿಧರ ಅವರಿಗೆ ಮಾಹಿತಿ ನೀಡಿದ್ದೇನೆ, ಎಂದಿದ್ದಾರೆ.

ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ಬಳಿಕ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದು, ಕೆಜೆಪಿಯಿಂದ ಬಂದವರಿಗೆ ಮಣೆ ಹಾಕಿ 20 ವರ್ಷಗಳಿಂದ ಪಕ್ಷದಲ್ಲಿರೋ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಸಹಿ ಸಂಗ್ರಹ ಮಾಡುವ ಮೂಲಕ ಪಕ್ಷದಲ್ಲಿ ಅಶಿಸ್ತು ಉಂಟು ಮಾಡಲು ಹೊರಟವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳೂಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ. 

ರಾಯಣ್ಣ ಬ್ರಿಗೇಡ್​ ಏಳಿಗೆಯನ್ನು ಒಂದೆಡೆ ಸಿದ್ದರಾಮಯ್ಯ, ಮತ್ತೊಂದೆಡೆ ಯಡಿಯೂರಪ್ಪನವರಿಗೆ ಸಹಿಸಲಾಗುತ್ತಿಲ್ಲ, ಆದರೆ ಯಾವುದೇ ಕಾರಣಕ್ಕೂ ನಾಳೆ ಕೂಡಲಸಂಗಮದಲ್ಲಿ ನಡೆಯಲಿರುವ ಸಮಾವೇಶ ನಿಲ್ಲುವುದಿಲ್ಲ, ಸಮಾವೇಶ ನಡೆಸಿದ ಬಳಿಕ ಸಮಸ್ಯೆ ಬಗೆ ಹರಿಸಲು ತುರ್ತು ಸಭೆ ಕರೆಯುವಂತೆ ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಲಾಗುವುದು, ಸಭೆಯನ್ನ ದೆಹಲಿ ಇಲ್ಲವೆ ಬೆಂಗಳೂರಿನಲ್ಲಿ ಎಲ್ಲೇ ಕರೆದರೂ ಹೋಗುತ್ತೇನೆ, ಎಂದು ಈಶ್ವರಪ್ಪ ಹೇಳಿದ್ದಾರೆ.