’ಇಂದು ಸಂಜೆಯೊಳಗೆ ಸಿಎಂ ಕೊಲೆ’!

First Published 8, Mar 2018, 2:48 PM IST
Eshvarappa Slams CM Siddaramaiah
Highlights

ಪ್ರತಿಪಕ್ಷ ನಾಯಕ ಈಶ್ವರಪ್ಪ ಸಿಎಂ ಮೇಲೆ ಸದಾ ವಾಗ್ದಾಳಿ ನಡೆಸುವುದು ಹೊಸದೇನೆಲ್ಲ. ಆದರೆ ಇಂದು ಸ್ವಲ್ಪ ಭಿನ್ನವಾಗಿ ಹೇಳಿಕೆ ನೀಡಿ ವಿವಾದ ಮಾಡಿಕೊಂಡಿದ್ದಾರೆ. 

ಬೆಂಗಳೂರು (ಮಾ.08): ಪ್ರತಿಪಕ್ಷ ನಾಯಕ ಈಶ್ವರಪ್ಪ ಸಿಎಂ ಮೇಲೆ ಸದಾ ವಾಗ್ದಾಳಿ ನಡೆಸುವುದು ಹೊಸದೇನೆಲ್ಲ. ಆದರೆ ಇಂದು ಸ್ವಲ್ಪ ಭಿನ್ನವಾಗಿ ಹೇಳಿಕೆ ನೀಡಿ ವಿವಾದ ಮಾಡಿಕೊಂಡಿದ್ದಾರೆ. 

ಸಿ ಎಂ ಸಿದ್ದರಾಮಯ್ಯ ಇಂದು ಸಂಜೆಯೊಳಗೆ ಕೊಲೆಯಾಗಬಹುದು.  ಸಿಎಂ ಸಿದ್ದರಾಮಯ್ಯ ಕೂಡಲೇ ಕೇಂದ್ರ ಸರ್ಕಾರದ  ಭದ್ರತೆ ಪಡೆಯಬೇಕು.  ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವಾಲಯದಿಂದ ನೆರವು ಪಡೆಯಬೇಕು. ಸಿಎಂ, ಗೃಹ ಸಚಿವರಿಗೂ ರಕ್ಷಣೆ ಅಗತ್ಯವಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. 

ನಿನ್ನೆ ಲೋಕಾಯುಕ್ತ ವಿಶ್ವನಾಥ ಶೆಟ್ಟಿಯವರಿಗೆ ಚೂರಿ  ಇರಿದು ಹತ್ಯೆಗೆ ಯತ್ನಿಸಿರುವ ಘಟನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಯಾರಿಗೂ ಭದ್ರತೆ ಇಲ್ಲ ಎಂದು ಹೇಳುವಾಗ ಈ ರೀತಿ ಹೇಳಿಕೆಯನ್ನು ಕೊಟ್ಟಿದ್ದಾರೆ.  

loader