2006ರಲ್ಲಿ ಮನೆಗಳ್ಳತನ ಪ್ರಕರಣ ಸಂಬಂಧ ಕಾರ್ತಿಕ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಮೊದಲ ಬಾರಿಗೆ ಸೆರೆಯಾದ ವೇಳೆಯಲ್ಲಿ 17 ಪ್ರಕರಣಗಳು ಪತ್ತೆಯಾಗಿದ್ದವು. ಇದಾದ ನಂತರ ಮರು ವರ್ಷವೇ ಪರಪ್ಪನ ಅಗ್ರಹಾರ ಅಬೇಧ್ಯ ಭದ್ರತಾ ಕೋಟೆ ನುಸುಳಿ ಪರಾರಿಯಾಗುವ ಮೂಲಕ ಬಂದೀಖಾನೆ ಅಧಿಕಾರಿಗಳಿಗೆ ಶಾಕ್‌ ನೀಡಿದ್ದ.
ಬೆಂಗಳೂರು(ಮೇ 18): ಸೆಂಟ್ರಲ್ ಜೈಲ್ ಬ್ರೇಕ್'ನಿಂದಲೇ ಕುಖ್ಯಾತಿ ಪಡೆದಿರುವ ವೃತ್ತಿಪರ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್, ಈಗ ಮತ್ತೆ ಕಳ್ಳತನ ಪ್ರಕರಣದಲ್ಲಿ ತನ್ನ ಸಹಚರನ ಜತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೆಲ ದಿನಗಳ ಹಿಂದೆ ತನ್ನ ಸಹಚರ ನವೀನ್ ಜತೆ ಕಳವು ಮಾಡಿದ ಮಾಲುಗಳನ್ನು ಮಾರಾಟಕ್ಕೆ ಯತ್ನಿಸಿದ್ದಾಗ ಕಾರ್ತಿಕ್ ಬಾಣಸವಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆರೋಪಿಗಳಿಂದ ಅರ್ಧ ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಹೆಣ್ಣೂರು ಸಮೀಪದ ಪ್ರಕೃತಿ ಲೇಔಟ್ ನಿವಾಸಿ ಕಾರ್ತಿಕ್, ಕಳೆದೊಂದು ದಶಕಗಳಿಂದ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದಾನೆ. ಆತನ ವಿರುದ್ಧ ಹೆಣ್ಣೂರು, ಬಾಣಸವಾಡಿ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಗಲು ಹೊತ್ತಿನಲ್ಲಿ ನಗರ ಸಂಚಾರ ನಡೆಸುವ ಕಾರ್ತಿಕ್, ಆ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ. ಬಳಿಕ ರಾತ್ರಿ ಆ ಮನೆಗಳ ಬೀಗ ಮುರಿದು ಚಿನ್ನಾಭರಣ ದೋಚುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
2006ರಲ್ಲಿ ಮನೆಗಳ್ಳತನ ಪ್ರಕರಣ ಸಂಬಂಧ ಕಾರ್ತಿಕ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಮೊದಲ ಬಾರಿಗೆ ಸೆರೆಯಾದ ವೇಳೆಯಲ್ಲಿ 17 ಪ್ರಕರಣಗಳು ಪತ್ತೆಯಾಗಿದ್ದವು. ಇದಾದ ನಂತರ ಮರು ವರ್ಷವೇ ಪರಪ್ಪನ ಅಗ್ರಹಾರ ಅಬೇಧ್ಯ ಭದ್ರತಾ ಕೋಟೆ ನುಸುಳಿ ಪರಾರಿಯಾಗುವ ಮೂಲಕ ಬಂದೀಖಾನೆ ಅಧಿಕಾರಿಗಳಿಗೆ ಶಾಕ್ ನೀಡಿದ್ದ.
ಈ ಎಸ್ಕೇಪ್ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಇಸ್ಕಾನ್ನಿಂದ ನಿತ್ಯ ಜೈಲಿಗೆ ಆಹಾರ ಪೂರೈಕೆಯಾಗುತ್ತಿತ್ತು. ಆಹಾರ ಸರಬರಾಜು ವಾಹನದ ಕೆಳ ಭಾಗದ ಕಂಬಿ ಮೇಲೆ ಮಲಗಿಕೊಂಡು ಕಾರ್ತಿಕ್ ಹೊರ ಬಂದಿದ್ದ. ಅಂದಿನಿಂದ ಆತನಿಗೆ ಎಸ್ಕೇಪ್ ಕಾರ್ತಿಕ್ ಎಂಬ ಅಡ್ಡ ಹೆಸರು ಬಂದಿತ್ತು. ಕೆಲ ದಿನಗಳ ಹಿಂದಷ್ಟೆಮನೆಗಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಕಾರ್ತಿಕ್, ಮಾಚ್ರ್ ಮೊದಲ ವಾರದಲ್ಲಿ ಜಾಮೀನು ಪಡೆದ ಹೊರ ಬಂದು ಮತ್ತೆ ತನ್ನ ಚಾಳಿ ಮುಂದುವರೆಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಕನ್ನಡಪ್ರಭ ವಾರ್ತೆ
epaper.kannadaprabha.in
