ಇಪಿಎಫ್‌ ಬಡ್ಡಿದರ ಶೇ.8.65ರಲ್ಲೇ ಮುಂದುವರಿಕೆ ಸಾಧ್ಯತೆ

news | Tuesday, February 13th, 2018
Suvarna Web Desk
Highlights

2017-18ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರವನ್ನು ಶೇ.8.65ರಲ್ಲೇ ಮುಂದುವರಿಸುವ ನಿರೀಕ್ಷೆಯಿದೆ.

ನವದೆಹಲಿ: 2017-18ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರವನ್ನು ಶೇ.8.65ರಲ್ಲೇ ಮುಂದುವರಿಸುವ ನಿರೀಕ್ಷೆಯಿದೆ.

ಫೆಬ್ರವರಿ 21ರಂದು ಇಪಿಎಫ್‌ ಧರ್ಮದರ್ಶಿ ಮಂಡಳಿಯ ಸಭೆ ನಡೆಯಲಿದ್ದು, ಈ ವೇಳೆ 5 ಕೋಟಿ ಇಪಿಎಫ್‌ ಚಂದಾದಾರರಿಗೆ ಕಳೆದ ವರ್ಷದ ಬಡ್ಡಿದರವನ್ನೇ ಮುಂದುವರಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇಪಿಎಫ್‌ಒ 2016-17ನೇ ಸಾಲಿಗೆ ಶೇ.8.65 ಬಡ್ಡಿ ದರ ನಿಗದಿ ಮಾಡಿತ್ತು. ಆದರೆ ಅದಕ್ಕಿಂತ ಹಿಂದಿನ ವರ್ಷ (2015-16) ಶೇ.8.8ರ

ಬಡ್ಡಿದರ ಇತ್ತು. ಈಗಾಗಲೇ ಶೇ.8.65ರ ದರವನ್ನೇ ಈ ವರ್ಷಕ್ಕೂ ಮುಂದುವರಿಸುವ ಉದ್ದೇಶದಿಂದ ಇಪಿಎಫ್‌ ಮಂಡಳಿಯು ವಿನಿಮಯ ವ್ಯಾಪಾರಿ ನಿಧಿಯನ್ನು 2,886 ಕೋಟಿ ರು.ಗಳಿಗೆ ಮಾರಾಟ ಮಾಡಿದೆ.

 

 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk