ನವದೆಹಲಿ/ಬೆಂಗಳೂರು, [ಡಿ.07]: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾಗೆ ಜಾರಿ ನಿರ್ದೇಶನಾಲಯ ಬಿಸಿ ಮುಟ್ಟಿಸಿದೆ. 

ರಕ್ಷಣಾ ಖರೀದಿ ವ್ಯವಹಾರದಲ್ಲಿ ರಾಬರ್ಟ್ ವಾದ್ರಾ ಅವರು ಕಮಿಷನ್ ಪಡೆದ ಆರೋಪ ಎದುರಿಸುತ್ತಿದ್ದಾರೆ. ಇದೀಗ ಇಂದು [ಶುಕ್ರವಾರ] ಬೆಂಗಳೂರಿನಲ್ಲಿರುವ DLFಕಚೇರಿ ಮೇಲೆ ದಾಳಿ ನಡೆದಿದೆ.

ಕೇವಲ ಬೆಂಗಳೂರು ಮಾತ್ರವಲ್ಲದೆ  ಇಡಿ ಅಧಿಕಾರಿಗಳು ನವದೆಹಲಿಯ ರಾಬರ್ಟ್ ವಾದ್ರಾ ಕಚೇರಿಯ ಬೀಗ ಮುರಿದು ಒಳ ನುಗ್ಗಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನಿರೀಕ್ಷಿಸಲಾಗಿದೆ.