ಚೆನ್ನೈ (ಸೆ.30): ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಸಿಎಂ ಜಯಲಲಿತಾ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಅವರ ಆರೋಗ್ಯ ವದಂತಿಗಳನ್ನು ಹರಡಬೇಡಿ. ಆಸ್ಪತ್ರೆಯಲ್ಲಿರುವ ಅವರ ಫೋಟೋಗಳನ್ನು ಬಿಡುಗಡೆ ಮಾಡಬೇಡಿ. ಅವರ ಆರೋಗ್ಯದ ಬಗ್ಗೆ ಜನರಿಗೆ ನಿರಂತರ ಮಾಹಿತಿ ನೀಡಬೇಡಿ ಎಂದು ಕರುಣಾನಿಧಿ ತಮಿಳುನಾಡು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಡಿಹೈಡ್ರೇಶನ್ ನಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಯಲಲಿತಾ ಆರೋಗ್ಯ ವಿಚಾರಿಸಿಕೊಳ್ಳಲು ಯಾಕೆ ಭೇಟಿ ನೀಡಲಿಲ್ಲ ಎಂದು ತಮಿಳುನಾಡು ರಾಜ್ಯಪಾಲರಿಗೆ ಕೇಳಿದ್ದಾರೆ.