ಹಿಂದಿಯನ್ನು ಪಠ್ಯಪುಸ್ತಕದಲ್ಲಿ ಕಡ್ಡಾಯ ಭಾಷೆಯಾಗಿ ಮಾಡುವ ಬದಲು ಶಿಕ್ಷಕರು ಸ್ವಯಂಪ್ರೇರಿತವಾಗಿ ಕಲಿಸಲು ಆಯಾ ರಾಜ್ಯಗಳು ಪ್ರೋತ್ಸಾಹಿಸಬೇಕು ಎಂದು ಮಾನವ ಸಂಪನ್ಮೂಲ ಇಲಾಖೆಯ ಹಿಂದಿ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.

ನವದೆಹಲಿ (ಮೇ.23): ಹಿಂದಿಯನ್ನು ಪಠ್ಯಪುಸ್ತಕದಲ್ಲಿ ಕಡ್ಡಾಯ ಭಾಷೆಯಾಗಿ ಮಾಡುವ ಬದಲು ಶಿಕ್ಷಕರು ಸ್ವಯಂಪ್ರೇರಿತವಾಗಿ ಕಲಿಸಲು ಆಯಾ ರಾಜ್ಯಗಳು ಪ್ರೋತ್ಸಾಹಿಸಬೇಕು ಎಂದು ಮಾನವ ಸಂಪನ್ಮೂಲ ಇಲಾಖೆಯ ಹಿಂದಿ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

10 ನೇ ತರಗತಿಯವರೆಗೆ ಸಿಬಿಎಸ್ ಸಿ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿಯನ್ನು ಕಡ್ಡಾಯ ವಿಷಯವನ್ನಾಗಿ ಮಾಡಲು ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಕೇಳುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಚಿಸಿದ್ದರು. ಇದಕ್ಕೆ ಹಿಂದಿಯೇತರ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು ಸೇರಿದಂತೆ ಎಲ್ಲಾ ಗಣ್ಯ ವ್ಯಕ್ತಿಗಳು ಹಿಂದಿಯಲ್ಲೇ ಭಾಷಣ ಮಾಡಬೇಕೆಂಬ ಶಿಫಾರಸ್ಸನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಮ್ಮತಿಸಿದ್ದರು.

9,10 ನೇ ತರಗತಿ ಮಕ್ಕಳಿಗೆ ಹಿಂದಿಯನ್ನು ಕಡ್ಡಾಯವಾಗಿ ಕಲಿಸಬೇಕೆಂದು ಸೂಚಿಸುವ ಬದಲು ಶಿಕ್ಷಕರು ಸ್ವಯಂಪ್ರೇರಿತವಾಗಿ ಕಲಿಸಲು ಆಯಾ ರಾಜ್ಯಗಳು ಪ್ರೋತ್ಸಾಹಿಸಬೇಕು ಎಂದು ಹಿಂದಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾನವ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.