Asianet Suvarna News Asianet Suvarna News

ಶಂಕಿತ ಉಗ್ರರ ಬಳಿ ಶಸ್ತ್ರವೇ ಇರಲಿಲ್ಲ; ಪೊಲೀಸರ ಮೇಲೆ ದಾಳಿ ಹೇಗೆ ಸಾಧ್ಯ?

‘‘ಎಂಟು ಮಂದಿಗೂ ಪೊಲೀ​ಸರು ಸೊಂಟ​ಕ್ಕಿಂತ ಮೇಲ್ಬಾ​ಗ​ದಲ್ಲೇ ಗುರಿ​ ಇಟ್ಟು ಗುಂಡು ಹೊಡೆ​­­ದಿ​­ದ್ದಾರೆ. ನ್ಯಾಯಾ​ಲ​ಯ​ಗಳ ಆದೇ​ಶ​ಗ​ಳ ಆಧಾ​ರ­ದಲ್ಲಿ ಹೇಳು​ವು​ದಾ​ದರೆ ಪೊಲೀ​ಸರು ಸೊಂಟ​ಕ್ಕಿಂತ ಕೆಳ​ಭಾ​ಗ​ಕ್ಕಷ್ಟೇ ಗುಂಡು ಹಾರಿ​ಸ­ಬೇಕು. ಈ ಪ್ರಕ​ರ​ಣ​ದಲ್ಲಿ ಸಮೀ​ಪ​­ದಿಂದಲೇ ತಲೆ, ಎದೆಗೆ ಗುಂಡಿಕ್ಕ­ಲಾ­ಗಿದೆ.''

encountered terrorists had no weapons says ats chief

ಭೋಪಾಲ/ಕೋಲ್ಕತಾ: ಭೋಪಾಲ ಕೇಂದ್ರ ಕಾರಾಗೃಹದಿಂದ ಪಾರಾರಿಯಾಗಿ ಎನ್‌ಕೌಂಟರ್‌ನಲ್ಲಿ ಅಸುನೀಗಿದ ಶಂಕಿತ ಸಿಮಿ ಕಾರ್ಯಕರ್ತರ ಬಳಿ ಆಯುಧಗಳೇ ಇರಲಿಲ್ಲ ಎಂದು ಮಧ್ಯಪ್ರದೇಶ ಉಗ್ರ ನಿಗ್ರಹ ದಳ (ಎಟಿಎಸ್‌)ಮುಖ್ಯಸ್ಥ ಸಂಜೀವ್‌ ಶಮಿ ಹೇಳಿ​ದ್ದಾರೆ. 
‘‘ ಶಂಕಿತ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆ​ಸಿ​ದರು. ಈ ವೇಳೆ ಪೊಲೀ​ಸರು ಮಾಡಿದ ಫೈರಿಂಗ್‌​ನಲ್ಲಿ ಉಗ್ರರು ಸತ್ತಿ​ದ್ದಾರೆ,'' ಎಂದು ಅಲ್ಲಿನ ಐಜಿಪಿ ಯೋಗೇಶ್‌ ಚೌದ್ರಿ ಹೇಳಿ​ದ್ದರು. ಆದರೆ, ಉಗ್ರರ ಬಳಿ ಶಸ್ತ್ರಾ​ಸ್ತ್ರ​ಗಳೇ ಇರ​ಲಿಲ್ಲ ಎಂದು ಶಮಿ ಅವರು ನೀಡಿರುವ ಈ ಹೇಳಿಕೆ ಪ್ರಕ​ರ​ಣಕ್ಕೆ ಹೊಸ ತಿರುವು ನೀಡಿದೆ. 

‘‘ಪೊಲೀಸರ ಬಲಪ್ರಯೋಗದ ಬಗ್ಗೆ ಕಾನೂನಿ­ನಲ್ಲಿ ಸ್ಪಷ್ಟ​ವಾಗಿದೆ. ಅಪಾಯಕಾರಿ ಕ್ರಿಮಿನಲ್‌ಗಳು ತಪ್ಪಿ​ಸಿ​ಕೊ​ಳ್ಳುತ್ತಿದ್ದಾರೆ ಎಂದಾಗ ಗರಿಷ್ಠ ಶಕ್ತಿ ಪ್ರಯೋ​ಗಿ​ಸ​ಲು ಸಾಧ್ಯ,'​ ಎಂದೂ ಅವರು ಹೇಳಿ​ದ್ದಾರೆ. ಅಂಥ ವ್ಯಕ್ತಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ​ಯಿದೆ ಎಂದು ಪೊಲೀಸರಿಗೆ ಮನವರಿಕೆ​ಯಾದಾಗ, ಅವರು ಗರಿಷ್ಠ ಪ್ರಮಾಣ ಶಕ್ತಿ ಪ್ರಯೋಗಿಸಬಹುದು'' ಎಂದೂ ಸಂಜೀವ್‌ ಶಮಿ ಹೇಳಿದ್ದಾರೆ ಎಂದು ಎನ್‌​ಡಿಟಿವಿ ವರದಿ ಮಾಡಿದೆ. 

ಇತರರ ವೈದ್ಯಕೀಯ ಪರೀಕ್ಷೆಗೆ ಅರ್ಜಿ: ಜೈಲಿನಲ್ಲಿ ಇರುವ ಇತರ ಶಂಕಿತ ಸಿಮಿ ಕಾರ್ಯಕರ್ತರ ವೈದ್ಯ​ಕೀಯ ಪರೀಕ್ಷೆ ನಡೆಸಲು ತಾವು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ದಾಖಲಿ​ಸುವುದಾಗಿ ಫರ್ವೇಜ್‌ ತಿಳಿಸಿ​ದ್ದಾರೆ. ಎನ್‌​​ಕೌಂಟರ್‌ಗೆ ಬಲಿಯಾದ ಎಲ್ಲರ ಮೃತದೇಹಗಳನ್ನು ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ಅಹಮದಾ​ಬಾದ್‌ ಮೂಲದ ಶೇಖ್‌ ಮುಜೀಬ್‌ನ ಮೃತದೇಹವನ್ನು ಆತನ ಕುಟುಂಬ​ಸ್ಥರು ತವರೂರಿಗೆ ತೆಗೆದುಕೊಂಡು ಹೋಗಿ​​ದ್ದಾರೆ. ಮೃತರ ಎಲ್ಲ ಕುಟುಂಬ​ಸ್ಥರು ಪೊಲೀಸ್‌ ಎನ್‌ಕೌಂಟರ್‌ನ ಸತ್ಯಾಸತ್ಯತೆಯ ಕುರಿತು ಪ್ರಶ್ನಿಸಿದ್ದಾರೆ. 

ಮರ​ಣೋ​ತ್ತರ ವರದಿ ಪ್ರಕಟ: ಶಂಕಿತ ಸಿಮಿ ಕಾರ್ಯಕರ್ತರಲ್ಲಿ ಎಲ್ಲರಿಗೂ ಕನಿಷ್ಠ ಎರಡು ಬಾರಿ ಗುಂಡೇಟು ತಗುಲಿದೆ. ಅವುಗಳಲ್ಲಿ ಕೆಲವು ಹಿಂದಿನಿಂದಲೂ ತಗುಲಿವೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ ಎಂದು ‘ಎನ್‌ಡಿಟಿವಿ' ವರದಿ ಮಾಡಿದೆ. ಎಲ್ಲ ಎಂಟು ಮಂದಿ ಗುಂಡೇಟಿ​ನಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ತಜ್ಞರು ವರದಿ ನೀಡಿದ್ದಾರೆ. ಕೆಲವರಿಗೆ ಸೊಂಟದ ಮೇಲೆ ಎರಡಕ್ಕಿಂತ ಹೆಚ್ಚು ಗುಂಡು ತಗು​​ಲಿವೆ. ನಾಲ್ಕು ಮಂದಿಯ ಪ್ರಕರಣ​ಗಳಲ್ಲಿ ಗುಂಡುಗಳು ದೇಹಗಳನ್ನು ತೂರಿ ಹೋಗಿವೆ. 

ಅನು​ಮಾನದ ಗುಂಡೇ​ಟು:
‘‘ಎಂಟು ಮಂದಿಗೂ ಪೊಲೀ​ಸರು ಸೊಂಟ​ಕ್ಕಿಂತ ಮೇಲ್ಬಾ​ಗ​ದಲ್ಲೇ ಗುರಿ​ ಇಟ್ಟು ಗುಂಡು ಹೊಡೆ​­­ದಿ​­ದ್ದಾರೆ. ನ್ಯಾಯಾ​ಲ​ಯ​ಗಳ ಆದೇ​ಶ​ಗ​ಳ ಆಧಾ​ರ­ದಲ್ಲಿ ಹೇಳು​ವು​ದಾ​ದರೆ ಪೊಲೀ​ಸರು ಸೊಂಟ​ಕ್ಕಿಂತ ಕೆಳ​ಭಾ​ಗ​ಕ್ಕಷ್ಟೇ ಗುಂಡು ಹಾರಿ​ಸ­ಬೇಕು. ಈ ಪ್ರಕ​ರ​ಣ​ದಲ್ಲಿ ಸಮೀ​ಪ​­ದಿಂದಲೇ ತಲೆ, ಎದೆಗೆ ಗುಂಡಿಕ್ಕ­ಲಾ­ಗಿದೆ,''ಎಂದು ವಕೀಲ ಫರ್ವೇಜ್‌ ಆಲಂ ಮಾಧ್ಯ​ಮ​ಗ​ಳಿಗೆ ತಿಳಿ​ಸಿ​ದ್ದಾರೆ. 

(ಕೃಪೆ: ಕನ್ನಡಪ್ರಭ)

Follow Us:
Download App:
  • android
  • ios