Asianet Suvarna News Asianet Suvarna News

ಈ ನೌಕರರಿಗೆ ಈ ವರ್ಷ ಇಲ್ವಂತೆ ಸ್ಯಾಲರಿ ಹೈಕ್

ಅತ್ಯಂತ ಸಂಕಷ್ಟದ ವರ್ಷಗಳನ್ನು ಎದುರಿಸುತ್ತಿರುವ ಟೆಲಿಕಾಂ ಉದ್ಯಮ ರಂಗದ ಶೇ.30-40ರಷ್ಟುನೌಕರರಿಗೆ ಈ ಬಾರಿ ವೇತನ ಏರಿಕೆ ಭಾಗ್ಯ ಇಲ್ಲ ಎನ್ನಲಾಗುತ್ತಿದೆ.ಇದರೊಂದಿಗೆ ಬೋನಸ್‌ ಕೂಡ ಶೇ.50ರಷ್ಟುಇಳಿಕೆಯಾಗುವ ಸಾಧ್ಯತೆಯಿದೆ.

Employees of telecom sector would not salary hike this timelec

ಮುಂಬೈ: ಅತ್ಯಂತ ಸಂಕಷ್ಟದ ವರ್ಷಗಳನ್ನು ಎದುರಿಸುತ್ತಿರುವ ಟೆಲಿಕಾಂ ಉದ್ಯಮ ರಂಗದ ಶೇ.30-40ರಷ್ಟುನೌಕರರಿಗೆ ಈ ಬಾರಿ ವೇತನ ಏರಿಕೆ ಭಾಗ್ಯ ಇಲ್ಲ ಎನ್ನಲಾಗುತ್ತಿದೆ.ಇದರೊಂದಿಗೆ ಬೋನಸ್‌ ಕೂಡ ಶೇ.50ರಷ್ಟುಇಳಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಸಾಕಷ್ಟುಕಂಪೆನಿಗಳು ನೌಕರರನ್ನು ಕೈಬಿಟ್ಟು, ಉದ್ಯೋಗ ಕಡಿತ ಮಾಡಿದ್ದರೂ, ಸುಮಾರು 2 ಲಕ್ಷದಷ್ಟುನೌಕರರು ಈ ವಲಯದಲ್ಲಿ ಉದ್ಯೋಗ ನಿರತರಾಗಿದ್ದಾರೆ.

2016ರ ಸೆಪ್ಟಂಬರ್‌ನಲ್ಲಿ ರಿಲಯನ್ಸ್‌ ಜಿಯೊ ಇಸ್ಫೋಕಾಂ ಮಾರುಕಟ್ಟೆಪ್ರವೇಶವು ಇತರ ಟೆಲಿಕಾಂ ಕಂಪೆನಿಗಳಿಗೆ ಭಾರೀ ಹೊಡೆತ ನೀಡಿದ್ದು, ಕಂಪನಿಯ ಮಾಲೀಕರು ಉದ್ಯಮ ನಿರ್ವಹಣೆಗೆ ಪರದಾಡುವಂತಾಗಿದೆ. ಕಳೆದ ಒಂದು ವರ್ಷ ಅತ್ಯಂತ ಕಠಿಣ ಅವಧಿಯಾಗಿದ್ದು, ಶೇ.40ರಷ್ಟುಉದ್ಯೋಗಿಗಳಿಗೆ ಈ ಬಾರಿ ವೇತನ ಏರಿಕೆ ಸಾಧ್ಯತೆಯಿಲ್ಲ. ಒಂದು ವೇಳೆ ಮಾಡಿದರೂ, ಅದು ಅತ್ಯಂತ ಅಲ್ಪ ಪ್ರಮಾಣದ್ದಾಗಿರುತ್ತದೆ ಎಂದು ಭಾರತೀಯ ಸೆಲ್ಯುಲರ್‌ ನಿರ್ವಾಹಕರ ಸಂಘದ ಆಡಳಿತ ನಿರ್ದೇಶಕ ರಾಜನ್‌ ಮ್ಯಾಥ್ಯೂ ಹೇಳಿದ್ದಾರೆ.

ಇದೇ ರೀತಿಯ ಅಭಿಪ್ರಾಯವನ್ನು ಉದ್ಯಮ ವಲಯದ ಹಲವು ಪ್ರಮುಖರು ವ್ಯಕ್ತಪಡಿಸಿದ್ದಾರೆ. ಆದರೆ, ಯಾವುದೇ ಟೆಲಿಕಾಂ ಕಂಪೆನಿಗಳು ಈ ಬಗ್ಗೆ ಸ್ಪಷ್ಟಉತ್ತರ ನೀಡಿಲ್ಲ.

Follow Us:
Download App:
  • android
  • ios