ಮಾಲ್ಡೀವ್ಸ್'ನಲ್ಲಿ ತುರ್ತು ಪರಿಸ್ಥಿತಿ

First Published 6, Feb 2018, 9:18 AM IST
Emergency in Maldives
Highlights

ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ಮಾಲ್ಡೀವ್‌್ಸನಲ್ಲಿ 15 ದಿನಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದರೊಂದಿಗೆ ಹಲವು ತಿಂಗಳಿನಿಂದ ರಾಜಕೀಯ ಗೊಂದಲಕ್ಕೆ ಸಿಕ್ಕಿಬಿದ್ದಿದ್ದ, ಜೊತೆಗೆ ಕಳೆದೊಂದು ವಾರದಿಂದ ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಬಿಕ್ಕಟ್ಟಿಗೆ ಸಾಕ್ಷಿಯಾಗಿದ್ದ ದೇಶ ಹೊಸದೊಂದು ಸಂಕಷ್ಟಕ್ಕೆ ಸಿಕ್ಕಿಬಿದ್ದಂತೆ ಆಗಿದೆ.

ಮಾಲೆ (ಫೆ.06): ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ಮಾಲ್ಡೀವ್‌್ಸನಲ್ಲಿ 15 ದಿನಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದರೊಂದಿಗೆ ಹಲವು ತಿಂಗಳಿನಿಂದ ರಾಜಕೀಯ ಗೊಂದಲಕ್ಕೆ ಸಿಕ್ಕಿಬಿದ್ದಿದ್ದ, ಜೊತೆಗೆ ಕಳೆದೊಂದು ವಾರದಿಂದ ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಬಿಕ್ಕಟ್ಟಿಗೆ ಸಾಕ್ಷಿಯಾಗಿದ್ದ ದೇಶ ಹೊಸದೊಂದು ಸಂಕಷ್ಟಕ್ಕೆ ಸಿಕ್ಕಿಬಿದ್ದಂತೆ ಆಗಿದೆ.

ವಿವಾದದ ಹಿನ್ನೆಲೆ: ಮಾಜಿ ಅಧ್ಯಕ್ಷ ಮಹಮ್ಮದ್‌ ನಶೀದ್‌ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ವಿವಿಧ ರಾಜಕೀಯ ಗಣ್ಯರನ್ನು ಬಿಡುಗಡೆ ಮಾಡುವಂತೆ ಕಳೆದ ವಾರ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಜೊತೆಗೆ ವಿಪಕ್ಷಗಳ 12 ಸಂಸದರ ಸದಸ್ಯತ್ವ ವಜಾ ಮಾಡಿದ್ದ ಸರ್ಕಾರದ ಆದೇಶವನ್ನೂ ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು. ಹೀಗಾಗಿ ಸಂಸತ್ತಿನಲ್ಲಿ ವಿಪಕ್ಷಗಳಿಗೆ ಬಹುಮತ ಬಂದಿತ್ತು. ಸುಪ್ರೀಂಕೋರ್ಟ್‌ನ ಈ ತೀರ್ಪು ಅಧ್ಯಕ್ಷ ಅಬ್ದುಲ್ಲಾ ಯಮೀನ್‌ ಅವರಿಗೆ ಭಾರೀ ಮುಖಭಂಗ ಉಂಟು ಮಾಡಿತ್ತು. ಹೀಗಾಗಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಾರೆ. ಈ ನಡುವೆ ಸದಸ್ಯತ್ವ ರದ್ದಾಗಿದ್ದ ವಿಪಕ್ಷದ 12 ಸಂಸದರು ಭಾನುವಾರ ತವರಿಗೆ ಮರಳುತ್ತಲೇ ಅವರನ್ನು ಬಂಧಿಸಲಾಗಿದೆ.

loader