ಚಿಕಿತ್ಸೆ ಫಲಕಾರಿಯಾಗದೇ ಕಾಡಾನೆ ಸಾವು

Elephant Died in Kodagu
Highlights

ಸೋಮವಾರಪೇಟೆ ತಾಲ್ಲೂಕಿನ ದುಬಾರೆ ಮೀಸಲು ಅರಣ್ಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. 

 ಕೊಡಗು (ಏ. 29): ಸೋಮವಾರಪೇಟೆ ತಾಲ್ಲೂಕಿನ ದುಬಾರೆ ಮೀಸಲು ಅರಣ್ಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. 

ಗುಂಡೇಟಿನಿಂದ ಗಾಯಗೊಂಡು ಕಳೆದ ಒಂದೂವರೆ ತಿಂಗಳಿನಿಂದ ಗಂಡಾನೆ ನಿತ್ರಾಣಗೊಂಡಿತ್ತು.  ಕಾಲಿಗೆ ಗಂಭೀರವಾಗಿ ಗಾಯಗೊಂಡು ಕುಂಟುತ್ತಿತ್ತು. ವನ್ಯಜೀವಿ ವೈದ್ಯಾಧಿಕಾರಿ ಮುಜೀಬ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದುಬಾರೆ ಸಾಕಾನೆ ಶಿಬಿರದ ಸಾಕಾನೆಗಳ ಸಹಕಾರದಿಂದ ಚಿಕಿತ್ಸೆ ನಡೆದಿತ್ತು. ಕಿವಿ, ಬೆನ್ನಿನಲ್ಲಿ ಗುಂಡಿನ ಗುರುತು, ಸೊಂಡಿಲಿನಲ್ಲಿ ಸೋಲಾರ್ ವಿದ್ಯುತ್ ಶಾಕ್ ಗುರುತು ಪತ್ತೆಯಾಗಿದೆ.  

ಗಂಭೀರ ಗಾಯಗಳಿಂದ ನಿತ್ರಾಣಗೊಂಡಿದ್ದರಿಂದ ಕಾಡಾನೆ ಸಾವನ್ನಪ್ಪಿದೆ. ಸ್ಥಳಕ್ಕೆ  ಹಿರಿಯ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

loader