ಕೆಸರಿನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ಕಾಡಾನೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ರಂಗ ಸಮುದ್ರದಲ್ಲಿ ನಡೆದಿದೆ.
ಕೊಡಗು : ಕೆಸರಿನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ಕಾಡಾನೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ರಂಗ ಸಮುದ್ರದಲ್ಲಿ ನಡೆದಿದೆ.
ಕೆಸರಿನಿಂದ ಮೇಲೆ ಬರಲು ಪ್ರಯಾಸಪಟ್ಟು ಬಸವಳಿದಿದ್ದ ಕಾಡಾನೆ ಮೃತಪಟ್ಟಿದೆ. ಕೆಸರಿನಲ್ಲಿ ಸಿಲುಕಿ ಮೇಲೆ ಬರಲು ಯತ್ನಿಸುತ್ತಿದ್ದ ವೇಳೆ ಆನೆಯನ್ನು ಮೇಲೆತ್ತಿ ರಕ್ಷಣೆ ಮಾಡಲಾಗಿತ್ತು.
ಹೆಚ್ಚು ಸಮಯದವರೆಗೂ ಕೆಸರಿನಲ್ಲಿ ಸಿಲುಕಿ ಒದ್ದಾಡಿದ ಪರಿಣಾಮವಾಗಿ ಹೆಚ್ಚು ಅಸ್ವಸ್ಥಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ಆನೆ ಇಂದು ಮುಂಜಾನೆ ಮೃತಪಟ್ಟಿದೆ.
(ಸಾಂದರ್ಭಿಕ ಚಿತ್ರ)
