ಕಸದಿಂದ ವಿದ್ಯುತ್ : ಫ್ರೆಂಚ್ ಕಂಪನಿ ಜೊತೆ ಪಾಲಿಕೆ ಒಪ್ಪಂದ

First Published 11, Mar 2018, 11:15 AM IST
Electricity Produced From Garbage In Bengaluru
Highlights

ಆನೇಕಲ್ ಬಳಿಯ ಚಿಕ್ಕನಾಗಮಂಗಲದ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನಿತ್ಯ 500 ಟನ್ ತ್ಯಾಜ್ಯದಿಂದ 10 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ‘ಅತ್ಯಾಧುನಿಕ ವಿದ್ಯುತ್ ಉತ್ಪಾದನಾ ಘಟಕ’ ಸ್ಥಾಪಿಸಲು ಬಿಬಿಎಂಪಿ ಮತ್ತು ‘3 ವೇಸ್ಟ್’ ಎಂಬ ಫ್ರೆಂಚ್ ಕಂಪನಿ ನಡುವೆ ಒಪ್ಪಂದ ಏರ್ಪಟ್ಟಿದೆ.

ಬೆಂಗಳೂರು: ಆನೇಕಲ್ ಬಳಿಯ ಚಿಕ್ಕನಾಗಮಂಗಲದ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನಿತ್ಯ 500 ಟನ್ ತ್ಯಾಜ್ಯದಿಂದ 10 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ‘ಅತ್ಯಾಧುನಿಕ ವಿದ್ಯುತ್ ಉತ್ಪಾದನಾ ಘಟಕ’ ಸ್ಥಾಪಿಸಲು ಬಿಬಿಎಂಪಿ ಮತ್ತು ‘3 ವೇಸ್ಟ್’ ಎಂಬ ಫ್ರೆಂಚ್ ಕಂಪನಿ ನಡುವೆ ಒಪ್ಪಂದ ಏರ್ಪಟ್ಟಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು 3 ವೇಸ್ಟ್ ಕಂಪನಿ ಅಧಿಕಾರಿಗಳು ಪರಸ್ಪರ ಒಪ್ಪಂದಕ್ಕೆ ಶುಕ್ರವಾರ ನವದೆಹಲಿಯಲ್ಲಿ ಸಹಿ ಹಾಕಿದರು. ಮೇಯರ್ ಸಂಪತ್ ರಾಜ್ ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಆಯುಕ್ತರು, ವಿವಿಧ ಷರತ್ತುಗಳೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಘಟಕ ನಿರ್ಮಾಣಕ್ಕೆ ಬಿಬಿಎಂಪಿಯ ಯಾವುದೇ ಅನುದಾನ ಬಳಕೆ ಮಾಡಲಾಗುವುದಿಲ್ಲ. ಸಂಪೂರ್ಣ ವೆಚ್ಚ ೩3 ವೇಸ್ಟ್ ಕಂಪನಿಯದ್ದಾಗಿರುತ್ತದೆ. ಅಗತ್ಯ ಜಾಗವನ್ನು ಗುತ್ತಿಗೆ ಮೂಲಕ ಮತ್ತು ನಿಧಿಷ್ಟ ಪ್ರಮಾಣದ ತ್ಯಾಜ್ಯವನ್ನು ಉಚಿತವಾಗಿ ಬಿಬಿಎಂಪಿ ಒದಗಿಸಲಿದೆ. ಇದರಿಂದ ನಿತ್ಯ 10 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ನಿತ್ಯ ಉತ್ಪಾದನೆಯಾಗುತ್ತಿರುವ 4000 ಟನ್‌ನಷ್ಟು ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಗೆ ದೊಡ್ಡ ಸದಸ್ಯೆಯಾಗಿ ಪರಿಣಮಿಸಿದ್ದು, ಇದಕ್ಕಾಗಿ ಪಾಲಿಕೆಯ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಆರಂಭಿಸಲು ಸರ್ಕಾರದ ಅನುಮತಿ ಕೋರಲಾಗಿತ್ತು. ಸರ್ಕಾರ ಇದಕ್ಕೆ ಬಿಬಿಎಂಪಿ ಮತ್ತು ಸರ್ಕಾರದಿಂದ ಯಾವುದೇ ಹಣಕಾಸಿನ ಹೂಡಿಕೆ ಇಲ್ಲದೆ ಖಾಸಗಿ ಸಂಸ್ಥೆಗಳಿಂದ ‘ಯೋಜನೆ ವಿನ್ಯಾಸ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಡಿಬಿಓಟಿ) ಆಧಾರದ ಷರತ್ತಿಗೆ ಬದ್ಧ ಅನುಮೋದನೆ ನೀಡಿತ್ತು.

loader