ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕೆಲ ರಾಜ್ಯಗಳಲ್ಲಿಯೂ ಕೂಡ ಚುನಾವಣೆ ನಡೆಸಲು  ಸಿದ್ಧತೆ ನಡೆಯುತ್ತಿದೆ. 

ಇತ್ತಿಚೆಗೆ ವಿಸರ್ಜಿಸಲ್ಪಟ್ಟ ತೆಲಂಗಾಣ ವಿಧಾನಸಭೆ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ಛತ್ತೀಸ್‌ಗಡ ಸೇರಿ ಒಟ್ಟು 5 ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಡಿಸೆಂಬರ್ 2 ನೇ ವಾರದೊಳಗೆ ಮುಗಿಯುವ ಸಾಧ್ಯತೆಯಿದೆ. 

ಐದು ರಾಜ್ಯಗಳ ಚುನಾವಣೆ ಜೊತೆಗೆ ನಡೆಸುವ ಸಾಧ್ಯತೆಯ ಬಗ್ಗೆ ಚುನಾವಣಾ ಆಯೋಗ ಪರಿಶೀಲಿಸುತ್ತಿದೆ ಎನ್ನಲಾಗಿದೆ.