ಪಂಚರಾಜ್ಯಗಳ ಚುನಾವಣೆಗಳು ಸಮೀಪಿಸುತ್ತಿದ್ದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಬೇಕೆಂದು ಚುನಾವಣಾ ಆಯೋಗ ಆರ್ ಬಿಐಗೆ ಮತ್ತೊಮ್ಮೆ ಬೇಡಿಕೆಯಿಟ್ಟಿದೆ.

ನವದೆಹಲಿ (ಜ.29): ಪಂಚರಾಜ್ಯಗಳ ಚುನಾವಣೆಗಳು ಸಮೀಪಿಸುತ್ತಿದ್ದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಬೇಕೆಂದು ಚುನಾವಣಾ ಆಯೋಗ ಆರ್ ಬಿಐಗೆ ಮತ್ತೊಮ್ಮೆ ಬೇಡಿಕೆಯಿಟ್ಟಿದೆ.

ಮುಕ್ತ ಮತ್ತು ಪಾರದರ್ಶಕವಾಗಿ ಚುನಾವಣೆಯನ್ನು ಆಯೋಜಿಸುವುದು ಚುನಾವಣಾ ಆಯೋಗದ ಸಾಂವಿಧಾನಿಕ ಆಜ್ಞೆಯಾಗಿದೆ. ಹಾಗಾಗಿ ಆರ್ ಬಿಐ ಆದೇಶವು ಸೂಕ್ತ ರೀತಿಯಲ್ಲಿ ಚುನಾವಣೆ ಆಯೋಜಿಸಲು ಅನುಕೂಲ ಮಾಡಿಕೊಡಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಪ್ರಸ್ತುತ ವಾರಕ್ಕೆ 24 ಸಾವಿರ ವಿತ್ ಡ್ರಾ ಮಾಡಬಹುದು. ಆದರೆ ಈ ಮಿತಿಯನ್ನು 2 ಲಕ್ಷಕ್ಕೇರಿಸಬೇಕೆಂದು ಚುನಾವಣಾ ಆಯೋಗ ಆರ್ ಬಿಐಗೆ ಕೇಳಿಕೊಂಡಿದೆ.