ನಾಳೆ ನಡೆಯಲಿರುವ ಹ್ಯಾಕಥಾನ್’ಗೆ ಚುನಾವಣಾ ಆಯೋಗವು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಚುನಾವಣೆಯಲ್ಲಿ ಬಳಸಿದ 10 ಕ್ಕೂ ಹೆಚ್ಚು ಇವಿಎಂನನ್ನು ಆಯೋಜಿಸಿಕೊಂಡಿದೆ. ಇವಿಎಂಗಳನ್ನು ಹ್ಯಾಕ್ ಮಾಡಿ ತೋರಿಸಲು ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಹೀಗಿರುವಾಗ ಉತ್ತರಾಖಂಡ ಹೈಕೋರ್ಟ್ ಇದು ಅಸಾಂವಿಧಾನಿಕ ಹಾಗಾಗಿ ಇದನ್ನು ರದ್ದುಪಡಿಸಿ. 4 ಗಂಟೆಯೊಳಗೆ ನಿಮ್ಮ ಸಮಜಾಯಿಷಿ ಸ್ಪಷ್ಟಪಡಿಸಿ ಎಂದು ಕೋರ್ಟ್ ಚುನಾವಣಾ ಆಯೋಗಕ್ಕೆ ಹೇಳಿದೆ.
ನವದೆಹಲಿ (ಜೂ.02): ನಾಳೆ ನಡೆಯಲಿರುವ ಹ್ಯಾಕಥಾನ್’ಗೆ ಚುನಾವಣಾ ಆಯೋಗವು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಚುನಾವಣೆಯಲ್ಲಿ ಬಳಸಿದ 10 ಕ್ಕೂ ಹೆಚ್ಚು ಇವಿಎಂನನ್ನು ಆಯೋಜಿಸಿಕೊಂಡಿದೆ. ಇವಿಎಂಗಳನ್ನು ಹ್ಯಾಕ್ ಮಾಡಿ ತೋರಿಸಲು ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಹೀಗಿರುವಾಗ ಉತ್ತರಾಖಂಡ ಹೈಕೋರ್ಟ್ ಇದು ಅಸಾಂವಿಧಾನಿಕ ಹಾಗಾಗಿ ಇದನ್ನು ರದ್ದುಪಡಿಸಿ. 4 ಗಂಟೆಯೊಳಗೆ ನಿಮ್ಮ ಸಮಜಾಯಿಷಿ ಸ್ಪಷ್ಟಪಡಿಸಿ ಎಂದು ಕೋರ್ಟ್ ಚುನಾವಣಾ ಆಯೋಗಕ್ಕೆ ಹೇಳಿದೆ.
ಚುನಾವಣಾ ಫಲಿತಾಂಶದಲ್ಲಿ ನಮ್ಮ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಆರೋಪಿಸಿದಾಗ ಚುನಾವಣೆಯಲ್ಲಿ ಬಳಸಿದ ಇವಿಎಂಗಳನ್ನು ಪ್ರತ್ಯೇಕವಾಗಿಡಲು ಉತ್ತರಾಖಂಡ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಆದರೆ ಕಾಂಗ್ರೆಸ್’ನವರಾದ ಡಾ. ರಮೇಶ್ ಪಾಂಡೆ ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ಚುನಾವಣಾ ಆಯೋಗ ನಾಳೆ ಹ್ಯಾಕಥಾನ್ ಆಯೋಜಿಸಿದೆ. ಇದು ಅಸಾಂವಿಧಾನಿಕ ಇದನ್ನು ರದ್ದುಗೊಳಿಸಿ ಎಂದು ಹೇಳಿದೆ.
