ಭೋಪಾಲ್ : ಮಧ್ಯ ಪ್ರದೇಶದ ಮತದಾರರ ಪಟ್ಟಿಯಲ್ಲಿ ಒಟ್ಟು 6.7 ಲಕ್ಷ ಅನರ್ಹ ಮತದಾರರಿರುವುದು ಪತ್ತೆಯಾಗಿದೆ.  ಮತದಾರರ ಪಟ್ಟಿ ಪರಿಶೀಲನೆ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ಮಾರ್ಚ್ 15ರಿಂದ ಏಪ್ರಿಲ್ 7ರವರೆಗೆ ನಡೆದ ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

ಇದರಲ್ಲಿ ಇರುವ ಅನೇಕ ಮತದಾರರು ಈಗಾಗಲೇ ಮೃತಪಟ್ಟಿದ್ದಾರೆ . ಅಲ್ಲದೇ ಕೆಲವರು 2 ಪ್ರದೇಶಗಳಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಕೆಲವರು ವಲಸೆ ಹೋಗಿದ್ದಾರೆ. ಇಂತಹ  6 ಲಕ್ಷಕ್ಕೂ ಅಧಿಕ ವೋಟರ್’ಗಳು ಪತ್ತೆಯಾಗಿದ್ದಾರೆ ಎಂದು ಮಧ್ಯ ಪ್ರದೇಶದ ಚುನಾವಣಾಧಿಕಾರಿ ಸಲಿನಾ ಸಿಂಗ್ ಹೇಳಿದ್ದಾರೆ.

ಹೊಸ ಚುನಾವಣಾ ಪಟ್ಟಿಯನ್ನು ಅಪಡೇಟ್ ಮಾಡುವ ವೇಳೆ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿವೆ. ಈ ಎಲ್ಲಾ ಹೆಸರುಗಳನ್ನೂ ಕೂಡ ಶೀಘ್ರ ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನಿಡಲಾಗಿದೆ ಎಂದು ಹೇಳಿದ್ದಾರೆ.