ಹಲವು ರಾಜ್ಯಗಳಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂಕಿನ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಇಂಕು ಬಳಸದಿರುವುದು ಒಳ್ಳೆಯದು ಎಂದು ಚುನಾವಣಾ ಆಯೋಗವು ಹಣಕಾಸು ಇಲಾಖೆಗೆ ಸಲಹೆ ನೀಡಿದೆ.

ನವದೆಹಲಿ(ನ. 18): ಬ್ಯಾಂಕಿನಲ್ಲಿ ನೋಟು ವಿನಿಮಯ ಮತ್ತು ಹಣ ವಿತ್'ಡ್ರಾ ಮಾಡಿಕೊಳ್ಳುವ ಜನರ ಬೆರಳಿಗೆ ಶಾಯಿ ಹಾಕುವ ಸರಕಾರದ ನಿರ್ಧಾರಕ್ಕೆ ಚುನಾವಣಾ ಆಯೋಗ ತಡೆಗಾಲು ಹಾಕುತ್ತಿದೆ. ಬೆರಳಿಗೆ ಶಾಯಿ ಹಾಕುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಸರಕಾರವನ್ನು ಕೇಳಿಕೊಂಡಿದೆ. ಹಲವು ರಾಜ್ಯಗಳಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂಕಿನ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಇಂಕು ಬಳಸದಿರುವುದು ಒಳ್ಳೆಯದು ಎಂದು ಚುನಾವಣಾ ಆಯೋಗವು ಹಣಕಾಸು ಇಲಾಖೆಗೆ ಸಲಹೆ ನೀಡಿದೆ.

ಚುನಾವಣೆ ವೇಳೆ ಮತದಾರರ ಎಡಗೈನ ತೋರುಬೆರಳಿಗೆ ಇಂಕು ಹಾಕಲಾಗುತ್ತದೆ. ಆದರೆ, ನೋಟು ವಿನಿಮಯದ ವೇಳೆ ಜನರ ಬಲಗೈನ ಬೆರಳಿಗೆ ಇಂಕು ಹಾಕಲು ನಿರ್ಧರಿಸಲಾಗಿದೆ ಎಂಬುದು ಸರಕಾರದ ಸಮರ್ಥನೆ.