ಚುನಾವಣಾ ನೀತಿ ಸಂಹಿತೆ ಜಾರಿ : ಅಧಿಕಾರಿಗಳಿಂದ ರಾಜಕಾರಣಿಗಳ ಮೇಲೆ ಹದ್ದಿನ ಕಣ್ಣು

First Published 27, Mar 2018, 2:07 PM IST
Election Code Of Cunduct
Highlights

ಚುನಾವಣಾ ನೀತಿ ಸಂಹಿತೆ ಜಾರಿ : ಅಧಿಕಾರಿಗಳಿಂದ ರಾಜಕಾರಣಿಗಳ ಮೇಲೆ ಹದ್ದಿನ ಕಣ್ಣು

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಮೇ 12ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ  ಚುನಾವಣಾ ನೀತಿ ಸಂಹಿತೆಯನ್ನು ಇಂದಿನಿಂದಲೇ ಜಾರಿ ಮಾಡಲಾಗಿದೆ.

ನೀತಿ ಸಂಹಿತೆಯಂತೆ ಯಾವ ನಿಯಮಗಳನ್ನು ಅನುಸರಿಸಬೇಕು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯದ ನೀತಿಗೆ ಸಂಬಂಧಿಸಿದ ಯಾವುದೇ ಸರ್ಕಾರಿ ನಿರ್ಣಯ ಕೈಗೊಳ್ಳುವಂತಿಲ್ಲ

ಯಾವುದೇ ಉದ್ಘಾಟನೆ, ಶಿಲಾನ್ಯಾಸ, ಮಾಡುವಂತಿಲ್ಲ

ಯಾವುದೇ ಹೊಸ ಭರವೆಗಳನ್ನು ನೀಡುವಂತಿಲ್ಲ

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಖಾಸಗಿ ಕಾರ್​ ಬಳಸತಕ್ಕದ್ದು

ಇವತ್ತು ಮದ್ಯಾಹ್ನದಿಂದಲೇ ಆಯಾ ಜಿಲ್ಲಾ ದಂಡಾಧಿಕಾರಿಗಳು ಸರ್ಕಾರಿ ಕಾರುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ

ಪ್ರಧಾನ ಮಂತ್ರಿ ಹೊರತುಪಡಿಸಿ ಉಳಿದ ಯಾರಿಗೂ ವಾಯುಪಡೆಯ ವಿಮಾನ, ಹೆಲಿಕಾಪ್ಟರ್​ ಬಳಸುವ ಅಧಿಕಾರವಿರುವುದಿಲ್ಲ

ಕೇವಲ ಪ್ರಧಾನಮಂತ್ರಿಗಳಿಗೆ ಮಾತ್ರ ವಿನಾಯ್ತಿ

 ಅಭ್ಯರ್ಥಿಗಳ ಖರ್ಚು ವೆಚ್ಚದ ಮಿತಿ 28 ಲಕ್ಷ

ಫಲಿತಾಂಶ ಬಂದ 30 ದಿವಸದಲ್ಲಿ ಖರ್ಚು ವೆಚ್ಚ ಸಂಪೂರ್ಣ ವಿವರವನ್ನು ಚುನವಣಾ ಆಯೋಗಕ್ಕೆ ನೀಡಬೇಕು

ರಾಜಕೀಯ ಪಕ್ಷಗಳು ಮಾಡುವ ಖರ್ಚಿಗೆ ಯಾವುದೇ ಮಿತಿ ಇಲ್ಲ

ಮತದಾನದ ದಿನ ಮತಗಟ್ಟೆಯ ಅಕ್ಕಪಕ್ಕದಲ್ಲಿ ಬಳಸಲಾಗುವ ರಾಜಕೀಯ ಪಕ್ಷದ ಪೆಂಡಾಲ್​ಗಳ ಖರ್ಚನ್ನು ಅಭ್ಯರ್ಥಿಯ ಖರ್ಚಿನ ಬಾಬ್ತಿನಲ್ಲಿ ಸೇರಿಸಲಾಗುತ್ತದೆ

ಫೈಯಿಂಗ್​ ಸ್ಕ್ವಾಡ್​ಗಳು, ರಾಜ್ಯ ವಿಚಕ್ಷಣಾ ತಂಡ, ವಿಡಿಯೋ ವಿಚಕ್ಷಣಾ ತಂಡ, ತೆರಿಗೆ ಇಲಾಖೆಯ ತನಿಖಾ ತಂಡದಿಂದ ಖರ್ಚು ವೆಚ್ಚಗಳ ಬಗ್ಗೆ ವಿಷೇಶ ನಿಗಾ

ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಖರ್ಚು ವೆಚ್ಚವನ್ನೂ ಸೇರಿಸಲಾಗುತ್ತದೆ

 

ಈ ತಂಡಗಳ ಅಧಿಕಾರಿಗಳನ್ನೂ ಜಿಪಿಎಸ್​ ಮೂಲಕ ಗಮನಿಸಲಾಗುವುದು

ರಾತ್ರಿ 10 ಗಂಟೆಯಿಂದ ಬೆಳಗಿನ ಆರು ಗಂಟೆಯವರೆಗೆ ಧ್ವನಿವರ್ಧಕ ನಿಷೇಧ

 ಶಾಲಾ ಕಾಲೇಜುಗಳು, ಆಸ್ಪತ್ರೆ, ವೃದ್ಧಾಶ್ರಮದ ಆವರಣದಲ್ಲಿ ಪ್ರಚಾರವನ್ನು ನಡೆಸುವಂತಿಲ್ಲ

ಕಾವೇರಿ ನಿರ್ವಹಣಾಮಂಡಳಿ ರಚನೆಗೆ ಮಾತ್ರ ಸುಪ್ರೀಕೋರ್ಟ್​ ಆದೇಶದ ಕಾರಣದಿಂದ ವಿನಾಯ್ತಿಯನ್ನು ಚುನಾವಣಾ ಆಯೋಗ ನೀಡಿದೆ

ಸೂಕ್ಷ್ಮ ಮತಗಟ್ಟೆಗಳಲ್ಲಿ ಅರೆಸೇನಾ ಪಡೆಗಳು, ರೂಟ್​ಮಾರ್ಚ್​ಗಳನ್ನ ನಡೆಸಿ ಮತದಾರರಲ್ಲಿ ವಿಶ್ವಾಸ ತುಂಬಲಿವೆ

ರಾಜ್ಯದ ಖರ್ಚು ಸೂಕ್ಷ್ಮ ಮತಗಟ್ಟೆಗಳ ಮೇಲೆ ವಿಶೇಷ ನಿಗಾ

ಆಯಾ ಚುನಾವಣಾ ಅಧಿಕಾರಿಗಳಿಂದ ವಿಶೇಷ ನಿಗಾ

ಆಯಾ ಕ್ಷೇತ್ರದ ಪೊಲೀಸ್​ ಜವಾಬ್ದಾರಿ ಕೇಂದ್ರದ ಚುನಾವಣಾ ಪರಿವೀಕ್ಷಕರ ಹೆಗಲಿಗೆ

ಚುನಾವಣಾ ಸಮಯದಲ್ಲಿ ಮದ್ಯದ ಉತ್ಪಾದನೆ, ಪೂರೈಕೆ, ಮಾರಾಟದ ಬಗ್ಗೆ ವಿಶೇಷ ನಿಗಾ ವಹಿಸಲು ಅಬಕಾರಿ ಇಲಾಖೆಗೆ ಸೂಚನೆ

ಪ್ರತಿಯೊಬ್ಬ ಅಭ್ಯರ್ಥಿ ಪ್ರತ್ಯೇಕ ಬ್ಯಾಂಕ್​ ಅಕೌಂಟ್​ ತೆಗೆದು ಚುನಾವಣಾ ಖರ್ಚುವೆಚ್ಚ ಆ ಅಕೌಂಟ್​ ಮೂಲಕವೇ ಭರಿಸಬೇಕು

ತೆರಿಗೆ ಇಲಾಖೆಗೆ ವಿಮಾನ ನಿಲ್ದಾಣಗಳಲ್ಲಿ ಹಣದ ಸಾಗಾಟದ ಬಗ್ಗೆ ವಿಶೇಷ ನಿಗಾವಹಿಸಲು ಚೆಕ್ಕಿಂಗ್​

ಜಿಲ್ಲಾ ಪಂಚಾಯತ್​ ಸಿಇವೋ, ಜಿಲ್ಲಾ ಖಜಾನಾ ಅಧಿಕಾರಿಗಳ ಕಮಿಟಿ ರಚನೆ

ರಾಜಕೀಯ ವ್ಯಕ್ತಿಗಳಲ್ಲದವರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡು ಪರಿಶೀಲನೆ

ಅನುಮತಿ ಪಡೆಯದೆ ವಾಹನ ಉಪಯೋಗಿಸುವ ರಾಜಕಾರಣಿಗಳ ಬಗ್ಗೆ ಕ್ರಮ

loader