ಇಸ್ರೇಲ್(ಜು.28): ಇಸ್ರೇಲ್'ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವಿಚಿತ್ರ ಎಂಬಂತೆ ಇಸ್ರೇಲ್ ಚುನಾವಣಾ ಬ್ಯಾನರ್’ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚುತ್ತಿದ್ದಾರೆ. 

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು ಇಸ್ರೇಲ್ ನಗರಗಳ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ.

ಕಟ್ಟಡವೊಂದರ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಇರುವ ಎಲೆಕ್ಷನ್ ಬ್ಯಾನರ್’ವೊಂದನ್ನು, ಇಸ್ರೇಲ್ ಪತ್ರಕರ್ತ ಅಮಿಚೈ ಸ್ಟೇಯಿನ್  ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  

ಕೇವಲ ಪ್ರಧಾನಿ ಮೋದಿ ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆಗೆ ನೇತನ್ಯಾಹು ಇರುವ ಪೋಟೋಗಳು ಕೂಡ ರಾರಾಜಿಸುತ್ತಿರುವುದು ವಿಶೇಷ.