ಮಂಗಳೂರು[ಜೂ. 03]  ಮುಸ್ಲಿಮರ ಪವಿತ್ರ ಈದ್ ಉಲ್ ಫಿತರ್ ಹಬ್ಬವನ್ನು ಜೂ.5ರಂದು ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.

ಕರಾವಳಿಯಲ್ಲಿ ಶವ್ವಾಲ್ ತಿಂಗಳ ಚಂದ್ರದರ್ಶನ ಆಗದ ಹಿನ್ನೆಲೆಯಲ್ಲಿ ಜೂ.4ರಂದು ರಂಜಾನ್ 30ನೇ ಉಪವಾಸ ಆಚರಿಸಲು ಖಾಝಿ ತೀರ್ಮಾನಿಸಿದ್ದಾರೆ ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಯೆನೆಪೋಯ ಅಬ್ದು ಕುಂಞಿ ಅವರ ಪ್ರಕಟಣೆ ತಿಳಿಸಿದೆ.

ರಂಜಾನ್ ಉಪವಾಸ  ಮಾಸದ ಆಚರಣೆಯನ್ನು ಮುಸ್ಲಿಮರು ಕಳೆದ ಒಂದು ತಿಂಗಳಿನಿಂದ ಮಾಡಿಕೊಂಡು ಬಂದಿದ್ದಾರೆ.