Asianet Suvarna News Asianet Suvarna News

ಎತ್ತಿನಹೊಳೆ ಕಾಮಗಾರಿ ಎಫೆಕ್ಟ್: ಜೀವಭಯದಲ್ಲಿ ಬದುಕುತ್ತಿದ್ದಾರೆ ಮಾರನಹಳ್ಳಿ ಜನ

ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಬಯಲು ಸೀಮೆಗೆ ಕುಡಿಯಲು ನೀರು ಕೊಡುವುದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ. ನೀರು ಸಿಗುತ್ತದೆ ಅನ್ನೋ ಖುಷಿಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜನರಿದ್ದರೆ, ನೀರು ನೀಡೋ  ಪಶ್ಚಿಮಘಟ್ಟ ಸಕಲೇಶಪುರದ ಜನರು ಜೀವಭಯದಲ್ಲಿದ್ದಾರೆ.

Effect of Yettinahole project on hassan people

ಹಾಸನ(ಅ.18): ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಬಯಲು ಸೀಮೆಗೆ ಕುಡಿಯಲು ನೀರು ಕೊಡುವುದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ. ನೀರು ಸಿಗುತ್ತದೆ ಅನ್ನೋ ಖುಷಿಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜನರಿದ್ದರೆ, ನೀರು ನೀಡೋ  ಪಶ್ಚಿಮಘಟ್ಟ ಸಕಲೇಶಪುರದ ಜನರು ಜೀವಭಯದಲ್ಲಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರದ ಮಾರನಹಳ್ಳಿ ಜನರಿಗೆ ಎತ್ತಿನಹೊಳೆ ಕಾಮಗಾರಿ ನೇರವಾಗಿ ತಟ್ಟಿದೆ. ನೀರು ಹರಿಸಲು ಕಲ್ಲು ಬಂಡೆ ಕೊರೆದು ಕಾಮಗಾರಿ ನಡೆಸಲಾಗುತ್ತಿದೆ. ಸುರಂಗ ಕೊರೆಯಲು ಸಿಡಿಮದ್ದು ಸ್ಪೋಟಕ ಬಳಸಲಾಗುತ್ತಿದ್ದು, ಸ್ಪೋಟಕದ ರಭಸಕ್ಕೆ ಮಾರನಹಳ್ಳಿಯ ಹತ್ತಾರು ಮನೆಗಳ ಮೇಲ್ಚಾವಣಿ ,ಗೋಡೆ ಬಿರುಕು ಬಿಟ್ಟಿವೆ. ಮನೆಹಾನಿ ಪರಿಹಾರ ನೀಡಲು ನೀರಾವರಿ ಇಲಾಖೆಯಾಗಲೀ, ಲೋಕೋಪಯೋಗಿ ಇಲಾಖೆಯಾಗಲಿ ಮುಂದಾಗುತ್ತಿಲ್ಲ.

ಇನ್ನು ಸಿಎಂ, ಡಿಸಿ ಎಲ್ಲರಿಗೂ ದೂರು ನೀಡಿದ್ದರೂ ಪ್ರಯೋಜನವಾಗದೇ ಸರ್ಕಾರಕ್ಕೆ ಮಾರನಹಳ್ಳಿ ಜನರು ಹಿಡಿಶಾಪ ಹಾಕುತ್ತಿದ್ದಾರೆ.

 

Follow Us:
Download App:
  • android
  • ios