ರೈಸಿಂಗ್ ಕಾಶ್ಮೀರ್ಪತ್ರಿಕೆಯ ಸಂಪಾದಕನ ಹತ್ಯೆಗುಂಡಿಟ್ಟು ಶುಜಾತ್ ಬುಖಾರಿ ಅವರ ಹತ್ಯೆಶ್ರೀನಗರದಲ್ಲಿ ನಡೆದ ಘಟನೆಕಚೇರಿಯಿಂದ ಹೊರ ಬರುತ್ತಿದ್ದಂತೇ ಗುಂಡಿನ ದಾಳಿಆಸ್ಪತ್ರೆ ಸಾಗಿಸುವ ಮಧ್ಯೆಯೇ ಕೊನೆಯುಸಿರೆಳೆದ ಬುಖಾರಿ

ಶ್ರೀನಗರ(ಜೂ.14): ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಶ್ರೀನಗರದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶುಜಾತ್ ಬುಖಾರಿ ಇಂದು ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲು ಕಚೇರಿಯಿಂದ ತೆರಳುತ್ತಿದ್ದಾಗ ಅಪರಿಚಿತ ಬಂದೂಕುಧಾರಿ ಅವರ ಮೇಲೆ ದಾಳಿ ಮಾಡಿದ್ದಾನೆ. ಗುಂಡೇಟಿನಿಂದ ಕುಸಿದು ಬಿದ್ದ ಬುಖಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

ಹಠಾತ್ತನೆ ನಡೆದ ದಾಳಿಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಬುಖಾರಿ ಅವರ ರಕ್ಷಣೆಗೆ ನೀಯೋಜಿತರಾಗಿದ್ದ ಇಬ್ಬರು ಪೊಲೀಸರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ದಾಳಿಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದ್ದು, ದಾಳಿಕೋರನ ಬಂದನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.