ಮುಂಬೈ(ಸೆ.25): 9000 ಕೋಟಿ ರು. ಸಾಲದ ಮರುಪಾವತಿ ಮಾಡಲು ತಾವು ಹಲವು ಬಾರಿ ಯತ್ನಿಸಿದರೂ, ಅದಕ್ಕೆ ಸ್ವತಃ ಜಾರಿ ನಿರ್ದೇಶನಾಲಯವೇ (ಇಡಿ) ಅಡ್ಡಿಯಾಗಿತ್ತು ಎಂದು ಉದ್ಯಮಿ ವಿಜಯ್ ಮಲ್ಯ ಆರೋಪಿಸಿದ್ದಾರೆ. 

ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕು ಎಂದು ಕೋರಿ ಇಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸೋಮವಾರ ಮಲ್ಯ ಪರ ವಕೀಲರು ಆ ಆರೋಪ ಮಾಡಿದರು. 

‘ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ನನ್ನ ಸಾಲದ ಮರುಪಾವತಿಗಾಗಿ ಕಳೆದ ಎರಡು-ಮೂರು ವರ್ಷಗಳಿಂದ ಯತ್ನಿಸುತ್ತಿದ್ದೆ. ಆದರೆ, ಇದಕ್ಕೆ ಅವಕಾಶ ಕಲ್ಪಿಸಿಕೊಡಬೇಕಿದ್ದ ಇಡಿ, ಅದರ ಬದಲು ಹಣ ಪಾವತಿಗೆ ಅಡ್ಡಿ ಮಾಡಿತು ಎಂದು ಮಲ್ಯ ಆರೋಪಿಸಿದರು.