Asianet Suvarna News Asianet Suvarna News

ಇವಿಎಂ ಪಾರದರ್ಶಕತೆ ಬಗ್ಗೆ ಅನುಮಾನ ಹಿನ್ನೆಲೆ: ರಾಜಕೀಯ ಪಕ್ಷಗಳಿಗೆ ಓಪನ್ ಚಾಲೆಂಜ್ ಹಾಕಿದ ಆಯೋಗ

ಇವಿಎಂ ಯಂತ್ರಗಳ ಪಾರದರ್ಶಕತೆ ಪ್ರಶ್ನಿಸುತ್ತಿರುವ ವಿಪಕ್ಷಗಳಿಗೆ ಇವತ್ತು ಕೇಂದ್ರ ಚುನಾವಣಾ ಆಯೋಗ ತಿರುಗೇಟು ನೀಡಿದೆ. ಇವಿಎಂ ಪ್ರಾತ್ಯಕ್ಷಿತೆ ನಡೆಸಿದ್ದಲ್ಲದೇ ಓಪನ್ ಚಾಲೆಂಜ್ ಹಾಕಿದೆ. ಇವಿಎಂ ದುರ್ಬಳಕೆ ಬಗ್ಗೆ ನಿಮ್ಮಲ್ಲಿ  ಸಾಕ್ಷಿ ಇದ್ದರೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿ ಅಂತಾ ಸವಾಲ್ ಹಾಕಿದೆ.

EC gets ready for EVM challenge

ನವದೆಹಲಿ(ಮೇ.21): ಇವಿಎಂ ಯಂತ್ರಗಳ ಪಾರದರ್ಶಕತೆ ಪ್ರಶ್ನಿಸುತ್ತಿರುವ ವಿಪಕ್ಷಗಳಿಗೆ ಇವತ್ತು ಕೇಂದ್ರ ಚುನಾವಣಾ ಆಯೋಗ ತಿರುಗೇಟು ನೀಡಿದೆ. ಇವಿಎಂ ಪ್ರಾತ್ಯಕ್ಷಿತೆ ನಡೆಸಿದ್ದಲ್ಲದೇ ಓಪನ್ ಚಾಲೆಂಜ್ ಹಾಕಿದೆ. ಇವಿಎಂ ದುರ್ಬಳಕೆ ಬಗ್ಗೆ ನಿಮ್ಮಲ್ಲಿ  ಸಾಕ್ಷಿ ಇದ್ದರೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿ ಅಂತಾ ಸವಾಲ್ ಹಾಕಿದೆ.

ಇತ್ತೀಚೆಗೆ ನಡೆದ ಪಂಚರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಇವಿಎಂ ಪಾರದರ್ಶಕತೆ ಬಗ್ಗೆ ಪ್ರಶ್ನೆ ತಲೆದೋರಿದೆ. ಉತ್ತರಪ್ರದೇಶದ ಚುನಾವಣೇಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಇವಿಎಂ ಯಂತ್ರಗಳ ದೋಷವೇ ಕಾರಣವೇ ಅಂತಾ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ  ಆರೋಪ ಮಾಡಿದ್ದರು. ಬಳಿಕ  ಆಪ್, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೂಡ ಅನುಮಾನ ವ್ಯಕ್ತಪಡಿಸಿದ್ವು. ಒಂದು ಹೆಜ್ಜೆ ಮುಂದೆ ಹೋದ ಆಪ್, ದಿಲ್ಲಿ ವಿಧಾನಸಭೆಯಲ್ಲಿ ಪ್ರಾತ್ಯಕ್ಷಿತೆ ಕೂಡ ಮಾಡಿತ್ತು.

ಪ್ರತಿಪಕ್ಷಗಳ ಆರೋಪಕ್ಕೆವ ನಿನ್ನೆ ಕೇಂದ್ರ ಚುನಾವಣಾ ಆಯೋಗ ತಿರುಗೇಟು ನೀಡಿತ್ತು. ಇವಿಎಂ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನಡೆಸಿತು. ಈ ಮೂಲಕ ಇವಿಎಂ ತಿರುಚಲು ಸಾಧ್ಯವೇ ಇಲ್ಲ ಅಂತಾ ಸ್ಪಷ್ಟಪಡಿಸಿತು.

ಇವಿಎಂ ಚಾಲೆಂಜ್! ಆರೋಪ ಸಾಬೀತು ಪಡಿಸಲು ವಿಪಕ್ಷಗಳಿಗೆ ಚಾಲೆಂಜ್

ಸೋಲಿಗೆ ಇವಿಎಂ ಯಂತ್ರಗಳ ಮೇಲೆ ಗೂಬೆ ಕೂರಿಸುತ್ತಿರುವ ಪ್ರತಿಪಕ್ಷಗಳಿಗೆ ಚುನಾವಣಾ ಆಯೋಗ ಓಪನ್ ಚಾಲೆಂಜ್ ಹಾಕಿದೆ. ಜೂನ್ 3 ರಿಂದ ಇವಿಎಂ ಹ್ಯಾಕಥಾನ್ ಆಯೋಜಿಸಲಾಗಿದ್ದು, ಆರೋಪಕ್ಕೆ ಪೂರಕವಾದ ಪುರಾವೆಯನ್ನು ಮೇ 26 ರೊಳಗೆ  ಆಯೋಗಕ್ಕೆ ಸಲ್ಲಿಸಿ ಅಂತಾ ವಿಪಕ್ಷಗಳಿಗೆ ಸವಾಲ್ ಹಾಕಿದೆ.

ಇನ್ನು ಮುಂದೆ ನಡೆಯುವ ಎಲ್ಲಾ ಚುನಾವಣೆಗಳಲ್ಲೂ ವಿವಿಪಿಎಟಿ ಬಳಸಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಒಟ್ನಲ್ಲಿ ಇವಿಎಂ ಪ್ರಾತ್ಯಕ್ಷಿತೆ ನಡೆಸುವ ಮೂಲಕ ಯಾವುದೇ ಕಾರಣಕ್ಕೂ ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಅಂತಾ ಸಮರ್ಥಿಸಿಕೊಂಡಿದೆ.

Follow Us:
Download App:
  • android
  • ios