ನವದೆಹಲಿ (ಡಿ. 27): 2019 ರ ಮಹಾಚುನಾವಣೆಯ ವೇಳೆ ಮತಗಟ್ಟೆಗಳಲ್ಲಿ ತಂಬಾಕು ಜಗಿಯವುಂತಿಲ್ಲ ಹಾಗೂ ಧೂಮಪಾನ ಮಾಡುವಂತಿಲ್ಲ ಎಂಬ ಹೊಸ ಆದೇಶವನ್ನು ಚುನಾವಣಾ ಆಯೋಗ ಹೊರಡಿಸಿದೆ.

ಆಯೋಗ ಇಂಥ ಆದೇಶ ಹೊರಡಿಸಿದ್ದು ಇದೇ ಮೊದಲು. ಈ ಸಂಬಂಧ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತನ್ನ ಆದೇಶ ಪಾಲನೆಯಾಗಬೇಕು ಎಂಬ ಸೂಚನೆ ನೀಡಿರುವ ಆಯೋಗ, ‘ಗುಟ್ಕಾ, ತಂಬಾಕು ಸೇದಿದಂತೆ ಎಲ್ಲ ರೀತಿಯ ಜಗಿಯುವ ತಂಬಾಕು ಹಾಗೂ ಸಿಗರೇಟ್‌, ಬೀಡಿ ಸೇರಿದಂತೆ ಎಲ್ಲ ರೀತಿಯ ಧೂಮಪಾನವನ್ನು ಮತಗಟ್ಟೆಗಳಲ್ಲಿ ನಿಷೇಧಿಸಲಾಗಿದೆ’ ಎಂದು ತಿಳಿಸಿದೆ. ಅಲ್ಲದೆ, ಎಲ್ಲ ಮತಗಟ್ಟೆಗಳಲ್ಲಿ ತಂಬಾಕು ನಿಷೇಧದ ಪೋಸ್ಟರ್‌ ಅಳವಡಿಸುವಂತೆ ತಿಳಿಸಿದೆ.