ವಿಧಾನ ಪರಿಷತ್ತಿಗೆ ಚುನಾವಣೆ ದಿನಾಂಕ ಪ್ರಕಟ

EC Announces Dates For Elections For 6  MLC Seats in Karnataka
Highlights

  • 6 ವಿಧಾನ ಪರಿಷತ್ತು ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟ
  • 3 ಪದವೀಧರ ಮತ್ತು 3 ಶಿಕ್ಷಕರ ವಿಧಾನ ಪರಿಷತ್ತು ಸ್ಥಾನಗಳಿಗೆ ಚುನಾವಣೆ

 

ನವದೆಹಲಿ [ಮೇ.11] : ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯದ 6 ವಿಧಾನ ಪರಿಷತ್ತು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗವು ಶನಿವಾರ ಚುನಾವಣೆಯನ್ನು ಘೋಷಿಸಿದೆ. 

3 ಪದವೀಧರ ಮತ್ತು 3 ಶಿಕ್ಷಕರ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ಆಯೋಗವು ದಿನಾಂಕವನ್ನು ಪ್ರಕಟಿಸಿದೆ.  

ದಕ್ಷಿಣ, ಆಗ್ನೆಯ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗು ಬೆಂಗಳೂರು, ಈಶಾನ್ಯ, ನೈರುತ್ಯ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣಾ ಆಯೋಗದ ಪ್ರಕಟಣೆ ಪ್ರಕಾರ,  ಮೇ 22ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು,  ಜೂನ್ 8 ಕ್ಕೆ ಮತದಾನ ನಡೆಯಲಿದೆ. ಜೂನ್ 12ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು.

loader