ಕೋಲಾರ: ನಗರದ ಕೆಲವೆಡೆ ಗುರುವಾರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಭೂಕಂಪವಾದ ಅನುಭವವಾಗಿದೆ.

ಭೂಮಿ ಸುಮಾರು 3 ರಿಂದ 4 ಸೆಕೆಂಡುಗಳ ಕಾಲ ಅಲುಗಾಡಿದ್ದನ್ನು ಜನರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನಗರದ ಹೊರವಲಯದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲೂ ಭೂಕಂಪವಾದ ಅನುಭವ ಕೆಲವರಿಗಾಗಿದೆ. ಕಚೇರಿಯ ಬಾಗಿಲು ಕಿಟಕಿಗಳು ಅಲುಗಾಡಿದೆ. ಅಲ್ಲ​ದೇ ತೋಟಗಾರಿಕೆ ಮಹಾ ವಿಶ್ವವಿದ್ಯಾಲಯದ ಡೀನ್‌ ಕಚೇರಿಯ ಗೋಡೆ ಬಿರುಕು ಬಿಟ್ಟಿದೆ. ಟಮಕ ಗ್ರಾಮದ ಸುತ್ತಮುತ್ತ ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿದವು ಎಂದು ಟಮಕ ಗ್ರಾಮಸ್ಥರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.