ನವದೆಹಲಿ : ದೇಶದ ಹಲವೆಡೆ ಮಂಗಳವಾರತಡರಾತ್ರಿ ಭೂ ಕಂಪನ ಸಂಭವಿಸಿದೆ. 

ಅಸ್ಸಾಂ. ಅರುಣಾಚಲ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. 

ರಾತ್ರಿ 1.45ರ ಸುಮಾರಿಗೆ ಭೂಕಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8ರ ತೀವ್ರತೆ ದಾಖಲಾಗಿದೆ. 

ಆದರೆ ಭೂ ಕಂಪನದ ವೇಳೆ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. 

ಇನ್ನು ನೇಪಾಳದಲ್ಲಿಯೂ ಕೂಡ   ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿದೆ.