ಚಂದ್ರ ಗ್ರಹಣಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಲಘು ಭೂಕಂಪನ ಸಂಭವಿಸಿದೆ.

ನವದೆಹಲಿ (ಜ.31): ಚಂದ್ರ ಗ್ರಹಣಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಲಘು ಭೂಕಂಪನ ಸಂಭವಿಸಿದೆ.

ದೆಹಲಿಯ ಎನ್'​ಸಿಆರ್'​ನಲ್ಲಿ ಭೂಮಿ ಕಂಪಿಸಿದೆ. ಭಯದಿಂದ ಮನೆ, ಕಚೇರಿಯಿಂದ ಜನರು ಹೊರ ಓಡಿ ಬಂದಿದ್ದಾರೆ. ಜಮ್ಮು- ಕಾಶ್ಮೀರದ ಹಲವೆಡೆ ಭೂಮಿ ಕಂಪಿಸಿದೆ. ಉತ್ತರ ಭಾರತದ ಹಲವೆಡೆ ಭೂಕಂಪನದ ಅನುಭವವಾಗಿದೆ. ಹರಿಯಾಣ, ಪಂಜಾಬ್​, ಹಿಮಾಚಲ ಪ್ರದೇಶದಲ್ಲೂ 10 ರಿಂದ 12 ಸೆಕೆಂಡ್​ಗಳ ಕಾಲ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ 6.1 ರಷ್ಟು ತೀವ್ರತೆ ದಾಖಲಾಗಿದೆ.