ರಾತ್ರಿ 3 ಬಾರಿ ನಡುಗಿದ ಭೂಮಿ ಮತ್ತೆ ಬೆಳಿಗ್ಗೆ 6 ಗಂಟೆ ಸುಮಾರಿಗೂ ಕಂಪನವಾಗಿದೆ
ಬೀದರ್(ನ.13): ಜಿಲ್ಲೆಯ ಹುಮನಾಬಾದ್ ತಾಲೂಕಿನ ಶಮ್ತಾಬಾದ್'ನಲ್ಲಿ ಮತ್ತೆ ಭೂಕಂಪದ ಅನುಭವವಾಗಿದೆ.ಶಮ್ತಾಬಾದ್'ನಲ್ಲಿ ರಾತ್ರಿ 3 ಬಾರಿ ನಡುಗಿದ ಭೂಮಿ ಮತ್ತೆ ಬೆಳಿಗ್ಗೆ 6 ಗಂಟೆ ಸುಮಾರಿಗೂ ಕಂಪನವಾಗಿದೆ. 2 ದಿನಗಳ ಹಿಂದೆಯಷ್ಟೇ ಶಮ್ತಾಬಾದ್'ನಲ್ಲಿ ಭೂಮಿ ಕಂಪಿಸಿತ್ತು. ಇದರಿಂದ ಆಂತಕಕ್ಕೊಳಗಾದ ಗ್ರಾಮಸ್ಥರು ರಾತ್ರಿಯಿಡಿ ಮಲಗದೆ ಮನೆಯಿಂದ ಹೊರಬಂದು ಜಾಗರಣೆ ಮಾಡಿದ್ದಾರೆ.
