Asianet Suvarna News Asianet Suvarna News

ಸರಕು ವಾಹನಗಳಿಗೆ ದೇಶಾದ್ಯಂತ ಇ-ವೇ ಬಿಲ್‌ ಜಾರಿ

 ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸುವ ಸರಕು ಸಾಗಣೆ ವಾಹನಗಳಿಗೆ ದೇಶಾದ್ಯಂತ ಏ.1ರಿಂದ ಇ-ವೇ ಬಿಲ್‌ ಜಾರಿಗೊಳಿಸಲಾಗಿದ್ದು, ಮೊದಲ ದಿನ ಯಾವುದೇ ತೊಂದರೆ ಉಂಟಾಗಿಲ್ಲ. ಜಿಎಸ್‌ಟಿಎನ್‌ ವೆಬ್‌ಸೈಟ್‌ ಕೂಡ ಸುರಳೀತವಾಗಿ ಕಾರ್ಯನಿರ್ವಹಿಸಿದೆ.

e bill is available for transportation of goods

ನವದೆಹಲಿ: ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸುವ ಸರಕು ಸಾಗಣೆ ವಾಹನಗಳಿಗೆ ದೇಶಾದ್ಯಂತ ಏ.1ರಿಂದ ಇ-ವೇ ಬಿಲ್‌ ಜಾರಿಗೊಳಿಸಲಾಗಿದ್ದು, ಮೊದಲ ದಿನ ಯಾವುದೇ ತೊಂದರೆ ಉಂಟಾಗಿಲ್ಲ. ಜಿಎಸ್‌ಟಿಎನ್‌ ವೆಬ್‌ಸೈಟ್‌ ಕೂಡ ಸುರಳೀತವಾಗಿ ಕಾರ್ಯನಿರ್ವಹಿಸಿದೆ.

ಆಯಾ ರಾಜ್ಯದೊಳಗೆ ಸಂಚರಿಸುವ ಸರಕು ಸಾಗಣೆ ವಾಹನಗಳಿಗೂ ಇ-ವೇ ಬಿಲ್‌ ವ್ಯವಸ್ಥೆ ಏ.15ರಿಂದ ಜಾರಿಗೆ ಬರುತ್ತಿದ್ದು, ಈಗಾಗಲೇ ಕರ್ನಾಟಕ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ರಾಜ್ಯದೊಳಗೆ ಸಂಚರಿಸುವ ಸರಕು ವಾಹನಗಳಿಗೆ ಇ-ವೇ ಬಿಲ್‌ ಜಾರಿಗೆ ತಂದ ಮೊದಲ ಹಾಗೂ ಏಕೈಕ ರಾಜ್ಯ ಕರ್ನಾಟಕ ಎಂದು ಜಿಎಸ್‌ಟಿಎನ್‌ ಅಧಿಕಾರಿಗಳು ತಿಳಿಸಿದ್ದಾರೆ. ಜಿಎಸ್‌ಟಿಎನ್‌ ವೆಬ್‌ಸೈಟಿನಲ್ಲೇ ಕರ್ನಾಟಕ ತನ್ನ ರಾಜ್ಯದೊಳಗೆ ಸಂಚರಿಸುವ ವಾಹನಗಳಿಗೆ ಇ-ವೇ ಬಿಲ್‌ ನೀಡುತ್ತಿದೆ.

50 ಸಾವಿರ ರು. ಮೌಲ್ಯಕ್ಕಿಂತ ಹೆಚ್ಚಿನ ಸರಕು ಹೊತ್ತು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸುವ ವಾಹನಗಳು ಜಿಎಸ್‌ಟಿ (ಸರಕು ಮತ್ತು ಸಾಗಣೆ ತೆರಿಗೆ) ವ್ಯವಸ್ಥೆಯಡಿ ಇ-ವೇ ಬಿಲ್‌ ಹೊಂದಿರುವುದು ಕಡ್ಡಾಯವಾಗಿದೆ. ಸರಕು ಸಾಗಣೆ ಮಾಡುವವರು ಮೊದಲಿಗೆ ಜಿಎಸ್‌ಟಿಎನ್‌ ವೆಬ್‌ಸೈಟಿನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಅಲ್ಲೇ ಇ-ವೇ ಬಿಲ್‌ ಪಡೆಯಬಹುದು. ದೇಶಾದ್ಯಂತ 1.05 ಕೋಟಿ ನೋಂದಾಯಿತ ಕಂಪನಿಗಳಿದ್ದು, ಇಲ್ಲಿಯವರೆಗೆ ಕೇವಲ 11 ಲಕ್ಷ ಕಂಪನಿಗಳು ಮಾತ್ರ ಇ-ವೇ ಬಿಲ್‌ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿವೆ.

Follow Us:
Download App:
  • android
  • ios