ಬಾಬಾಗೆ ನೀಡಿದ್ದ ಭದ್ರತಾ ವ್ಯವಸ್ಥೆ ವಾಪಸ್ ಪಡೆದುಕೊಂಡಿದ್ದೇವೆ. ಬಾಬಾ ಅನುಯಾಯಿಗಳಿಂದ 5 ಪಿಸ್ತೂಲ್ಗಳು ವಶಕ್ಕೆ ಪಡೆಯಲಾಗಿದ್ದು, ಸಾಮಾನ್ಯ ಕೈದಿಯಂತೆ ಬಾಬಾ ರಹೀಂ'ನನ್ನು ಜೈಲಿನಲ್ಲಿರಲಾಗಿದೆ.
ನವದೆಹಲಿ(ಆ.26): ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದ ಸಂಘಟನೆಯ ಮುಖ್ಯಸ್ಥ ಸ್ವಯಂ ಘೋಷಿತ ದೇವ ಮಾನವ ರಾಮ್ ರಹೀಂ'ನ ಬ್ಯಾಗನ್ನು ಹಿಡಿದುಕೊಂಡಿದ್ದ ಹರ್ಯಾಣ ಡೆಪ್ಯುಟಿ ಎಜಿ ಗುರುದಾಸ್ ಸಿಂಗ್ ಅವರನ್ನು ಹರ್ಯಾಣ ಸರ್ಕಾರ ವಜಾಗೊಳಿಸಿದೆ.
ರಾಮ್ ರಹೀಮ್ ಸಿಂಗ್ ಜೊತೆ ಇದ್ದ ಡಿಪ್ಯೂಟಿ ಎಜಿ ಗುರುದಾಸ್ ಬ್ಯಾಗ್ ಹೊತ್ತೊಯ್ದಿದ್ದ ದೃಶ್ಯಗಳು ಮಾಧ್ಯಮಗಳಲ್ಲಿ ಸೆರೆಯಾದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಹರ್ಯಾಣ, ಪಂಜಾಬ್ನಲ್ಲಿ ಗಲಭೆ ಹಿನ್ನೆಲೆಯಲ್ಲಿ ಹರಿಯಾಣ ಡಿಜಿಪಿ ಬಿ.ಎಸ್.ಸಂಧು ಸುದ್ದಿಗೋಷ್ಠಿ ನಡೆಸಿದ್ದು, ಜೈಲಿನಲ್ಲಿ ರಾಮ್ ರಹೀಂಗೆ ವಿಶೇಷ ಸೌಲಭ್ಯ ನೀಡಿಲ್ಲ. ಭದ್ರತಾ ಕಾರಣಗಳಿಂದಾಗಿ ಹೆಲಿಕಾಪ್ಟರ್ ಬಳಕೆ ಮಾಡಲಾಗಿದೆ. ಬಾಬಾಗೆ ನೀಡಿದ್ದ ಭದ್ರತಾ ವ್ಯವಸ್ಥೆ ವಾಪಸ್ ಪಡೆದುಕೊಂಡಿದ್ದೇವೆ. ಬಾಬಾ ಅನುಯಾಯಿಗಳಿಂದ 5 ಪಿಸ್ತೂಲ್ಗಳು ವಶಕ್ಕೆ ಪಡೆಯಲಾಗಿದ್ದು, ಸಾಮಾನ್ಯ ಕೈದಿಯಂತೆ ಬಾಬಾ ರಹೀಂ'ನನ್ನು ಜೈಲಿನಲ್ಲಿರಲಾಗಿದೆ.
ಹಿಂಸಾಚಾರವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಹರ್ಯಾಣದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಹಿಂಸಾಚಾರದಲ್ಲಿ ಭಾಗಿಯಾದ 254ಕ್ಕೂ ಹೆಚ್ಚು ಮಂದಿಯನ್ನು ಈಗಗಲೇ ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ಮೃತಪಟ್ಟವರೆಲ್ಲರೂ ಬಾಬಾ ಭಕ್ತರಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ವಿಫಲವಾಗಿಲ್ಲ. ಲಕ್ಷಾಂತರು ಭಕ್ತರು ಇದ್ದ ಕಾರಣ ನಾವು ವಿಳಂಬ ಮಾಡಿದವು ' ಎಂದು ಡಿಜಿಪಿ ಬಿ.ಎಸ್.ಸಂಧು ತಿಳಿಸಿದ್ದಾರೆ.
