‘ಸಿದ್ದರಾಮಯ್ಯನವರೇ ಒಂದು ವೇದಿಕೆ ಸಿದ್ಧಪಡಿಸೋಣ. ದಾಖಲೆಗಳ ಮುಖಾಂತರ ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂದು ನಾನು ತೋರಿಸಿಕೊಡುತ್ತೇನೆ. ಅಮಿತ್ ಶಾ ಹೇಳಿದ್ದರಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಇಲ್ಲವಾದಲ್ಲಿ ನೀವು ರಾಜಕೀಯದಿಂದ ದೂರವಾಗುತ್ತಿರಾ?’ - ಇದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಸಿದ್ದರಾಮಯ್ಯನವರಿಗೆ ಹಾಕಿದ ಸವಾಲು.

ಬೆಂಗಳೂರು(ಆ.18): ‘ಸಿದ್ದರಾಮಯ್ಯನವರೇ ಒಂದು ವೇದಿಕೆ ಸಿದ್ಧಪಡಿಸೋಣ. ದಾಖಲೆಗಳ ಮುಖಾಂತರ ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂದು ನಾನು ತೋರಿಸಿಕೊಡುತ್ತೇನೆ. ಅಮಿತ್ ಶಾ ಹೇಳಿದ್ದರಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಇಲ್ಲವಾದಲ್ಲಿ ನೀವು ರಾಜಕೀಯದಿಂದ ದೂರವಾಗುತ್ತಿರಾ?’ - ಇದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಸಿದ್ದರಾಮಯ್ಯನವರಿಗೆ ಹಾಕಿದ ಸವಾಲು.

ಕೇಂದ್ರ ಸರ್ಕಾರ 10ಸಾವಿರ ಕೋಟಿಯಷ್ಟು ಕಡಿಮೆ ಅನುದಾನ ಕೊಟ್ಟಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಅವರು ಬು‘ವಾರ ಬಿಜೆಪಿ ರಾಷ್ಟ್ರಾ‘್ಯಕ್ಷ ಅಮಿತ್ ಶಾರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸದಾನಂದ ಗೌಡ ಅವರು ಈ ಸವಾಲು ಹಾಕಿದ್ದಾರೆ. ಉಡುಪಿ ಜಿಲ್ಲೆಯ ಆನೆಗುಡ್ಡೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರದ ಅನುದಾನದ ಬಗ್ಗೆ ಲೆಕ್ಕ ಕೇಳಲು ಅಮಿತ್ ಶಾ ಯಾರು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಗೆ ತಿರುಗೇಟು ನೀಡಿದರು.

ದೇಶದ ಪ್ರತಿಯೊಬ್ಬನಿಗೂ ದೇಶದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ಅಧಿಕಾರವಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವುದು ಬಿಜೆಪಿ ಸರ್ಕಾರ. ಬಿಜೆಪಿ ಅ‘್ಯಕ್ಷರಾಗಿ ಅವರಿಗೆ ಸಿದ್ದರಾಮಯ್ಯರನ್ನು ಪ್ರಶ್ನಿಸುವ ಅಧಿಕಾರವಿದೆ ಎಂದರು.