ಟೀ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಇದು. ಹಲವು ವರ್ಷಗಳಿಂದ ಉತ್ತರಕರ್ನಾಟಕದಲ್ಲಿ ಫೇಮಸ್ ಆಗಿದ್ದ ಟೀ ಪುಡಿ ಬ್ರ್ಯಾಂಡ್ ಒಂದರಲ್ಲಿ ಹಾನಿಕಾರಕ ಬಣ್ಣ ಮಿಕ್ಸ್ ಆಗಿರುವುದು ಸಾಬೀತಾಗಿದೆ.

ಗದಗ/ ಕಲಬುರಗಿ: ಟೀ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಇದು. ಹಲವು ವರ್ಷಗಳಿಂದ ಉತ್ತರಕರ್ನಾಟಕದಲ್ಲಿ ಫೇಮಸ್ ಆಗಿದ್ದ ಟೀ ಪುಡಿ ಬ್ರ್ಯಾಂಡ್ ಒಂದರಲ್ಲಿ ಹಾನಿಕಾರಕ ಬಣ್ಣ ಮಿಕ್ಸ್ ಆಗಿರುವುದು ಸಾಬೀತಾಗಿದೆ.

ಬೆಳಿಗ್ಗೆ ಎದ್ದು ಒಂದು ಕಪ್ ಟೀ ಕುಡಿದ್ರೆ ಫ್ರೆಶ್ ಆಗ್ತೀವಿ. ಆದರೆ ಇದೇ ಟೀ ನಿಮ್ಮ ಜೀವಕ್ಕೆ ಮಾರಕವಾಗಬಹುದು. ಹೌದು, ಟೀ ಸಖತ್ ಕಲರ್ ಫುಲ್ ಹಾಗೂ ಟೇಸ್ಟಿ ಆಗಿದೆ ಎಂದು ನೀವೇನಾದ್ರೂ ಸೇವಿಸಿದ್ರೆ, ಶಿವನ ಪಾದ ಸೇರೋದು ಗ್ಯಾರಂಟಿ.

ಗದಗದಲ್ಲಿ ಲೋಬೋಸಾ ಟೀ ಅಂದ್ರೆ ಫೇಮಸ್. ಇದು ಗದಗ ಮಾತ್ರವಲ್ಲ. ಹೋರ ರಾಜ್ಯಗಳಲ್ಲೂ ಮಾರಾಟವಾಗುತ್ತೆ. ಆದರೆ, ಈ ಪ್ರಾಡಕ್ಟ್ ಇದೀಗ ಸುದ್ದಿಯಾಗ್ತಿದೆ. ಈ ಟೀ ಪುಡಿಯಲ್ಲಿ ಆರೋಗ್ಯಕ್ಕೆ ಹಾನಿಯಾಗುವಂತಹ ಬಣ್ಣವನ್ನ ಮಿಕ್ಸ್ ಮಾಡಲಾಗುತ್ತೆ ಎಂಬ ಆರೋಪ ಕೇಳಿಬಂದಿದೆ.

2015ರಲ್ಲಿ ಸಂಶಯದ ಮೇರೆಗೆ ಅಹಾರ ಸಂರಕ್ಷಣಾ ಅಧಿಕಾರಿಗಳು ಕೋಲ್ಕತ್ತಾದಲ್ಲಿರುವ NABL ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದಾಗ, ಟೀ ಪುಡಿ ಬಣ್ಣ ಮಿಶ್ರಿತವಾಗಿತ್ತು. ಅಲ್ಲದೇ, ಕಬ್ಬಿಣ ಮಿಶ್ರಿತವಾಗಿದೆ ಎಂದು ವರದಿ ಬಂದಿತ್ತು. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಲೋಬೋಸಾ ಕಂಪನಿ ಮಾಲೀಕರನ್ನು ಕೇಳಿದ್ರೆ, ನಿಯಮ ಮೀರಿ ಬಣ್ಣ ಮಿಶ್ರಣ ಮಾಡಿಲ್ಲ. ಒಂದು ಕೆ.ಜಿ. ಟೀ ಪುಡಿಗೆ ಎರಡು ಗ್ರಾಂ ಬಣ್ಣ ಮಿಶ್ರಣ ಮಾಡುತ್ತೇವೆ. ಇದರಿಂದ ಮಾನವನ ದೇಹಕ್ಕೆ ಏನೂ ಹಾನಿ ಇಲ್ಲ ಎನ್ನುತ್ತಾರೆ ಲೋಬೋಸಾ ಮಾಲೀಕ.

ಟೀ ಬಣ್ಣಕ್ಕೆ ಮಾರುಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾಕಂದ್ರೆ, ಇದರಲ್ಲಿ ಹಾನಿಕಾರಕ ವಿಷ ಇರುತ್ತೆ ಹುಷಾರ್.

ಕಲಬುರಗಿ ಮಾರುಕಟ್ಟೆಯಲ್ಲಿ ನಕಲಿ ಟೀ ಹಾವಳಿ:

ಮುಂಜಾನೆದ್ದು ಬಿಸಿ ಬಿಸಿ ಟೀ ಕುಡಿದ್ರೆ ಸಂತೋಷವೇ ಬೇರೆ ಅನ್ನೋ ಸಾಕಷ್ಟು ಜನ ಇದ್ದಾರೆ. ಈ ಟೀ ನಿಮ್ಮ ದಿನಚರಿಗೆ ಉತ್ಸಾಹ ನೀಡುವ ಬದಲು ನಿಮಗೆ ಮಾರಕ ಕ್ಯಾನ್ಸರ್ ರೋಗ ತರಬಹುದು ಹುಷಾರ್.. !!

ಹೌದು, ನಕಲಿ ಟೀ ಪುಡಿ ಮಾರುಕಟ್ಟೆಯಲ್ಲಿ ರಾಜಾರೋಷವಾಗಿ ಮಾರಾಟವಾಗ್ತಿದೆ. ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಒಮ್ಮೆ ಟೀ ತಯಾರಿಸಲು ಉಪಯೋಗಿಸಿ ಬಿಸಾಕುವ ಟೀ ಪುಡಿಯ ತ್ಯಾಜ್ಯವನ್ನೇ ಮತ್ತೆ ಬಳಕೆ ಮಾಡಿಕೊಂಡು ಟೀ ಪುಡಿ ತಯಾರಿಸುವ ಜಾಲ ಪತ್ತೆಯಾಗಿದೆ.

ಹೀಗೆ ಬಳಕೆ ಮಾಡಿಕೊಂಡು ಬಿಸಾಕಿದ ಟೀ ಪುಡಿಯ ತ್ಯಾಜ್ಯಕ್ಕೆ ಬಣ್ಣ ಬೆರೆಸಿ ಒಣಗಿಸಿ ಪ್ಯಾಕ್ ಮಾಡಿ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ಈ ರೀತಿಯ ನಕಲಿ ಟೀ ಪುಡಿ ತಯಾರಿಸಿ ಕರ್ನಾಟಕದ ಕಲಬುರಗಿ ಮತ್ತಿತರ ಕಡೆ ಮಾರಾಟ ಮಾಡಲಾಗುತ್ತಿತ್ತು. ಕಲಬುರಗಿಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆ ಅಧಿಕಾರಿಗಳು ವಿವಿಧ ಹೋಟೆಗಳಲ್ಲಿ ಪರಿಶೀಲನೆ ನಡೆಸಿದಾಗ ಈ ಅಂಶ ಕಂಡು ಬಂದಿತ್ತು.

ಇದರ ಬೆನ್ನು ಬಿದ್ದ ಅಧಿಕಾರಿಗಳು, ಮಹಾರಾಷ್ಟ್ರದಿಂದ ಕಲಬುರಗಿಗೆ ತಂದು ಮಾರಾಟ ಮಾಡುತ್ತಿದ್ದ ವಾಜಿದ್ ಶೇಖ ಎಂಬಾತನನ್ನು ಬಂಧಿಸಿ ಆತನಿಂದ 120 ಕೆಜಿ, 37 ಸಾವಿರ ರೂಪಾಯಿ ಮೌಲ್ಯದ ನಕಲಿ ಟೀ ಪುಡಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಈ ಕುರಿತು ಕಲಬುರಗಿಯ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ವರದಿ: ಗದಗನಿಂದ ಅಮೃತ ಅಜ್ಜಿ / ಶರಣಯ್ಯ ಹೀರೆಮಠ