ಪತ್ರಕರ್ತರು, ‘ಏನ್ ಸಾರ್ ಸಿಕ್ಕಾಪಟ್ಟೆ ಯಂಗ್ ಆಗಿ ಕಾಣಿಸ್ತೀರಲ್ಲಾ?’ ಎಂದಾಗ ‘ಹೆಂಗೆಂಗೋ ಕಾಣಬಾರದು ಅಂತ ಹಿಂಗಾಗಿದ್ದೀನಿ, ನೋಡಿ’ ಎಂದು ತಮ್ಮದೇ ಟಿಪಿಕಲ್ ಸ್ಟೈಲ್‌ನಲ್ಲಿ ಉತ್ತರಿಸಿದ್ದರು

ದುನಿಯಾ ಸೂರಿ ನಿಜಕ್ಕೂ ಸ್ಪೆಷಲ್ ಡೈರೆಕ್ಟರ್ ಆಗಿದ್ದಾರೆ. ಹೀರೊಗಳನ್ನೂ ಹೀರೋಗಳನ್ನೂ ಮೀರಿಸೋ ಹಾಗೆ ತಯಾರಾಗಿದ್ದಾರೆ. ಕೇವಲ 6 ತಿಂಗಳಲ್ಲಿ

ತೆರೆ ಮೇಲೆ ಮಿಂಚುವ ಹೀರೋಗಳು ಸಿಕ್ಸ್‌ಪ್ಯಾಕ್ ಮಾಡುವುದು ಕಾಮನ್. ಆದರೆ, ಪರದೆ ಮೇಲೆ ಆ ನಾಯಕ ನಟರನ್ನು ಆಟವಾಡಿಸುವ ಹಿಂದಿನ ಸೂತ್ರಧಾರಿ ಸಿಕ್ಸ್‌ಪ್ಯಾಕ್ ಮೂಡಿಸಿಕೊಂಡರೆ ಹೇಗಿರುತ್ತದೆ ಎಂಬುದಕ್ಕೆ ಈ ಫೊಟೋದಲ್ಲಿರುವ ಸೂರಿ ಸಾಕ್ಷಿ! ತುಂಬಾ ದಿನಗಳ ನಂತರ ‘ದೊಡ್ಮನೆ ಹುಡ್ಗ’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದ ಸೂರಿ ತೀರಾ ತಳ್ಳಗಾಗಿದ್ದರು. ಆಗಲೇ ಪತ್ರಕರ್ತರು, ‘ಏನ್ ಸಾರ್ ಸಿಕ್ಕಾಪಟ್ಟೆ ಯಂಗ್ ಆಗಿ ಕಾಣಿಸ್ತೀರಲ್ಲಾ?’ ಎಂದಾಗ ‘ಹೆಂಗೆಂಗೋ ಕಾಣಬಾರದು ಅಂತ ಹಿಂಗಾಗಿದ್ದೀನಿ, ನೋಡಿ’ ಎಂದು ತಮ್ಮದೇ ಟಿಪಿಕಲ್ ಸ್ಟೈಲ್‌ನಲ್ಲಿ ಉತ್ತರಿಸಿದ್ದರು ಸೂರಿ.

ಈಗ ನೋಡಿದರೆ ‘ದೊಡ್ಮನೆ ಹುಡ್ಗ’ನನ್ನು ತೆರೆಮೇಲೆ ಬಿಟ್ಟು, ‘ಟಗರು’ವನ್ನು ಚಿತ್ರೀಕರಣದ ಮೈದಾನಕ್ಕೆ ಕರೆದುಕೊಂಡು ಬರುವ ಗ್ಯಾಪ್‌ನಲ್ಲಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡಿ ಸಿಕ್ಸ್‌ಪ್ಯಾಕ್ ಫಿಕ್ಸ್ ಮಾಡ್ಕೊಂಡಿದ್ದಾರೆ. ಕನ್ನಡ ಚಿತ್ರರಂಗ ಸಿಕ್ಸ್‌ಪ್ಯಾಕ್ ಹೀರೋನನ್ನು (ದುನಿಯಾ ಚಿತ್ರದ ಮೂಲಕ ವಿಜಯ್) ಪರಿಚಯಿಸಿದ ಸೂರಿ, ಈಗ ತಾವೇ ಸಿಕ್ಸ್‌ಪ್ಯಾಕ್ ಕಸರತ್ತಿಗೆ ದೇಹವನ್ನೊಡ್ಡಿದ್ದಾರೆ. ಸೂರಿಯ ಈ ಹೊಸ ಲುಕ್ಕು ಖ್ಯಾತ ಛಾಯಾಗ್ರಾಹಕ ಮಹೇಂದ್ರಸಿಂಹ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಟಾರ್ ಹೀರೋಗಳ ಕಣ್ಣು ಕುಕ್ಕುವಂತಿರುವ ಸೂರಿಯ ಈ ವರ್ಕೌಟ್ ಸಿನಿಮಾಕ್ಕಾಗಿಯೇ ಇದ್ದಿರಬಹುದಾ? ಒಟ್ಟಿನಲ್ಲಿ ಕನ್ನಡ ಸಿನಿರಸಿಕರಂತೂ ಮೊದಲ ಸಿಕ್ಸ್‌ಪ್ಯಾಕ್ ನಿರ್ದೇಶಕನ ದರ್ಶನವನ್ನು ಈ ಮೂಲಕ ಮಾಡಿಕೊಂಡಿದ್ದಾರೆ! ಅಂದ ಹಾಗೆ ಈ ರೀತಿಯಾಗಲು ಪ್ರಮುಖ ಕಾರಣ ಅವರ ತಾಯಿಯಂತೆ. 

Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ