Asianet Suvarna News Asianet Suvarna News

ಸ್ಟಂಟ್ ಮಾಡುವಾಗ ಲೈಫ್ ಜಾಕೆಟ್ ಹಾಕಿದ್ದು ದುನಿಯಾ ವಿಜಿ ಮಾತ್ರ?

ಮೊದಲ ಮಹಡಿಯಿಂದ ಕೆಳಗೆ ನೋಡಿದರೆಯೇ ಭಯವಾಗುತ್ತಿದೆ ಎಂದು ಹೇಳಿಕೊಂಡಿದ್ದ ನಟ ಉದಯ್ ಯಾವುದೇ ಲೈಫ್ ಜಾಕೆಟ್ ಹಾಕದೇ ನೀರಿಗೆ ಹೇಗೆ ಧುಮುಕುವ ಧೈರ್ಯ ತೋರಿದರು?

dunia vijay weared life jacket but not two others
  • Facebook
  • Twitter
  • Whatsapp

ಬೆಂಗಳೂರು(ನ. 07): ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರೀಕರಣ ವೇಳೆ ಇಬ್ಬರು ನಟರ ಸಾವಿನ ಜಿಗಿತದ ಪ್ರಕರಣದ ಸ್ಯಾಂಡಲ್ವುಡ್'ನಲ್ಲಿ ದೊಡ್ಡ ಕೋಲಾಹಲವನ್ನೇ ಮೂಡಿಸುತ್ತಿದೆ. ಈ ಪ್ರಕರಣದಲ್ಲಿ ಶೂಟಿಂಗ್ ತಂಡದವರ ಬೇಜವಾಬ್ದಾರಿತನ ಸ್ಪಷ್ಟವಾಗಿ ಎದ್ದುಗಾಉತ್ತಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ, ಕಿರಿಯ ಕಲಾವಿದರ ಬಗ್ಗೆ ಚಿತ್ರತಂಡಕ್ಕೆ ನಿರ್ಲಕ್ಷ್ಯತೆ ಇದೆಯಾ ಎಂದು ಅನುಮಾನ ಮೂಡಿಸುವಂಥ ಸಂಗತಿಯೂ ಬೆಳಕಿಗೆ ಬಂದಿದೆ. ಹೆಲಿಕಾಪ್ಟರ್'ನಿಂದ ಕೆಳಗೆ ಜಲಾಶಯದ ನೀರಿಗೆ ರಾಘವ ಉದಯ್ ಮತ್ತು ಅನಿಲ್ ಜೊತೆ ನಾಯಕನಟ ದುನಿಯಾ ವಿಜಿ ಕೂಡ ಧುಮುಕುತ್ತಾರೆ. ಆದರೆ, ದುನಿಯಾ ವಿಜಿ ತಮ್ಮ ದೇಹಕ್ಕೆ ಲೈಫ್ ಜಾಕೆಟ್ ಧರಿಸಿರುತ್ತಾರೆ. ಹೀಗಾಗಿ, ಅವರು ಸುರಕ್ಷಿತವಾಗಿ ಮೇಲೆ ಬರುತ್ತಾರೆ. ಇನ್ನು, ಉದಯೋನ್ಮುಖ ಕಲಾವಿದರೆನಿಸಿದ್ದ ಉದಯ್ ಮತ್ತು ಅನಿಲ್ ಯಾವುದೇ ಲೈಫ್ ಜಾಕೆಟ್ ಧರಿಸಿರುವುದಿಲ್ಲ. ಈ ವಿಷಯವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುವಂತಿದೆ. ದುರಂತ ಸಾವಿಗೀಡಾದ ಇಬ್ಬರು ನಟರಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ; ಅಲ್ಲದೇ, ಮೊದಲ ಮಹಡಿಯಿಂದ ಕೆಳಗೆ ನೋಡಿದರೆಯೇ ಭಯವಾಗುತ್ತಿದೆ ಎಂದು ಸುವರ್ಣನ್ಯೂಸ್ ವರದಿಗಾರ ರೇವನ್ ಜೇವೂರ್ ಬಳಿ ಹೇಳಿಕೊಂಡಿದ್ದ ನಟ ಉದಯ್ ಯಾವುದೇ ಲೈಫ್ ಜಾಕೆಟ್ ಹಾಕದೇ ನೀರಿಗೆ ಹೇಗೆ ಧುಮುಕುವ ಧೈರ್ಯ ತೋರಿದರು ಎಂಬ ಅನುಮಾನವೂ ಕಾಡುತ್ತಿದೆ. ದೊಡ್ಡ ನಟರ ಜೀವಕ್ಕೆ ಇರುವ ಬೆಲೆ ಕಿರಿಯ ನಟರ ಜೀವಕ್ಕೆ ಇಲ್ಲವಾ? ಇವರ ಸಾವು ಕೊಲೆ ಎನಿಸುವುದಿಲ್ಲವಾ?

Follow Us:
Download App:
  • android
  • ios