ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸುಳಿವು ನೀಡಿದ  ಬೆನ್ನಲ್ಲೇ ತಲೈವಾಗೆ ಬೆದರಿಕೆ ನೀಡಿದ್ದಾರೆ. ತಮಿಳು ಮುನೇತ್ರ  ಸಂಘಟನೆಗಳು ರಜನಿ ರಾಜಕೀಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿವೆ. ರಜನಿ ರಾಜಕೀಯ ಪ್ರವೇಶ ಖಂಡಿಸಿ ರಜನಿಗೆ ತಮಿಳು ಸ್ಥಳೀಯ ಬೆದರಿಕೆಯ ಕರೆಗಳು ಬರುತ್ತಿವೆ. ಹಿನ್ನೆಲೆಯಲ್ಲಿ  ರಜನಿಕಾಂತ್ ಚೆನ್ನೈ ನಿವಾಸಕ್ಕೆ ಭದ್ರೆತೆಯನ್ನ ಒದಗಿಸಲಾಗಿದೆ.

ಬೆಂಗಳೂರು (ಮೇ.22): ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸುಳಿವು ನೀಡಿದ ಬೆನ್ನಲ್ಲೇ ತಲೈವಾಗೆ ಬೆದರಿಕೆ ನೀಡಿದ್ದಾರೆ. ತಮಿಳು ಮುನೇತ್ರ ಸಂಘಟನೆಗಳು ರಜನಿ ರಾಜಕೀಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿವೆ. ರಜನಿ ರಾಜಕೀಯ ಪ್ರವೇಶ ಖಂಡಿಸಿ ರಜನಿಗೆ ತಮಿಳು ಸ್ಥಳೀಯ ಬೆದರಿಕೆಯ ಕರೆಗಳು ಬರುತ್ತಿವೆ. ಹಿನ್ನೆಲೆಯಲ್ಲಿ ರಜನಿಕಾಂತ್ ಚೆನ್ನೈ ನಿವಾಸಕ್ಕೆ ಭದ್ರೆತೆಯನ್ನ ಒದಗಿಸಲಾಗಿದೆ.

ತಲೈವಾ ರಜನಿಕಾಂತ್ ರಾಜಕೀಯ ಎಂಟ್ರಿ ಬಗ್ಗೆ ಇಡೀ ದೇಶದಲ್ಲಿಯೇ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಎಲ್ಲರೂ ರಜನಿ ರಾಜಕೀಯಕ್ಕೆ ನಿಜವಾಗಿಯೂ ಬರುತ್ತಾರಾ ಎನ್ನುವ ಕುತೂಹಲದಲ್ಲಿ ಕಾಯುತ್ತಿದ್ದಾರೆ. ಆದರೆ ಯಾವಾಗ ರಜನಿ ರಾಜಕೀಯ ಬರುವ ಸೂಚನೆಗಳನ್ನ ನೀಡಿದ್ರೋ ಆಗ ಅವರ ರಾಜಕೀಯ ವಿರೋಧಿ ಗುಂಪು ಅವರ ಮೇಲೆ ರಾಜಕೀಯಕ್ಕೆ ಬರದಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ. ರಜನಿಯ ರಾಜಕೀಯ ಪ್ರವೇಶ ವಿರೋಧಿಸಿ ತಮಿಳುನಾಡಲ್ಲಿ ಪ್ರತಿಭಟನೆಗೂ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಜನಿ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.