ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೊಂದಿಗೆ ಶುಕ್ರವಾರ ಕಾರ್ಯಕ್ರಮವೊಂದಲ್ಲಿ ಪಾಲ್ಗೊಳ್ಳಲು ಒಟ್ಟಿಗೆ ಪ್ರಯಾಣಿಸಬೇಕಿತ್ತು. ಆದರೆ, ದೇವೇಗೌಡರು ಅಂತಿಮ ಹಂತದಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದೇ ಇರುವುದರಿಂದ ಅವರೊಂದಿಗೆ ಭೇಟಿ ಆಗಲಿಲ್ಲ. ಆದರೆ, ಶೀಘ್ರವೇ ಅವರನ್ನು ಭೇಟಿ ಮಾಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಏ.21): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೊಂದಿಗೆ ಶುಕ್ರವಾರ ಕಾರ್ಯಕ್ರಮವೊಂದಲ್ಲಿ ಪಾಲ್ಗೊಳ್ಳಲು ಒಟ್ಟಿಗೆ ಪ್ರಯಾಣಿಸಬೇಕಿತ್ತು. ಆದರೆ, ದೇವೇಗೌಡರು ಅಂತಿಮ ಹಂತದಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದೇ ಇರುವುದರಿಂದ ಅವರೊಂದಿಗೆ ಭೇಟಿ ಆಗಲಿಲ್ಲ. ಆದರೆ, ಶೀಘ್ರವೇ ಅವರನ್ನು ಭೇಟಿ ಮಾಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಜಯಗಳಿಸಿದ ನೂತನ ಶಾಸಕರ ಪ್ರಮಾಣ ವಚನದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ದೇವೇಗೌಡರು ನಾನು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಪಾಲ್ಗೊಳ್ಳುವವರಿದ್ದರು. ಒಟ್ಟಿಗೆ ಹೋಗಬೇಕಿತ್ತು. ಆದರೆ, ಅನ್ಯ ಕಾರ್ಯಕ್ರಮದ ನಿಮಿತ್ತ ಅವರು ಪಾಲ್ಗೊಳ್ಳುತ್ತಿಲ್ಲ. ಮುಂದೆ ದೇವೇಗೌಡರ ಭೇಟಿ ಮಾಡುವೆ. ಉಪಚುನಾವಣೆಯಲ್ಲಿ ಸಹಕಾರ ನೀಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು. ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ದೇವೇಗೌಡ ಮತ್ತು ಸಿದ್ದರಾಮಯ್ಯ ಪಾಲ್ಗೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಬೆಂಗಳೂರಿನಿಂದ ಒಂದೇ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವರು ಎಂದು ಶುಕ್ರವಾರ ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಒಂದು ವೇಳೆ ಪ್ರಯಾಣಿಸಿದ್ದರೆ, ದಶಕಗಳ ನಂತರ ಈ ನಾಯಕರು ಒಟ್ಟಿಗೆ ಪ್ರಯಾಣಿಸಿದಂತಾಗುತ್ತಿತ್ತು.