ಹುಬ್ಬಳ್ಳಿ(ನ.15): ಟಿಕೆಟ್ ತಗೆದುಕೊಳ್ಳಿ ಎಂದ ಕಂಡಕ್ಟರ್'ಗೆ, ಪೊಲೀಸಪ್ಪನೊಬ್ಬ ಅವಾಜ್ ಹಾಕಿದ್ದಾನೆ.  'ನಾನು ಜಿಲ್ಲಾ ಪಂಚಾಯಿತ್ ಸದಸ್ಯರ ಸಹೋದರ ನಾನು ಟಿಕೆಟ್ ತಗೆದುಕೊಳ್ಳುವುದಿಲ್ಲ ಎನ್ ಮಾಡ್ಕೊತಿಯಾ ಮಾಡ್ಕೊ' ಎಂದು ಹುಬ್ಬಳ್ಳಿಯಿಂದ ಮುಂಡರಗಿಗೆ ತೆರಳುತ್ತಿದ್ದ ಬಸ್'ನಲ್ಲಿ ಪೇದೆಯೊಬ್ಬ ಕಂಡಕ್ಟರ್'ಗೇ ಆವಾಜ್ ಹಾಕಿದ್ದಾನೆ.

ನಾನು ಡಂಬಳ್ ಜಿಲ್ಲಾ ಪಂಚಾಯಿತ್ ಸದಸ್ಯ ಭೀರಪ್ಪ ಸಹೋದರ ಆರ. ಬಿ ಪಾಟೀಲ್ ಎಂದು ಹೇಳಿಕೊಂಡಿರುವ ಪೇದೆ. ಮದ್ಯಪಾನ ಮಾಡಿ ಬಸ್ಸನಲ್ಲಿ ಸಂಚರಿಸುತ್ತಿರುವಾಗ ಕಂಡಕ್ಟರ್ ಗೆ ಜೋರು ಮಾಡಿದ್ದಾನೆ. ಮುಂಡರಗಿ  ಪೊಲೀಸ ಠಾಣೆಯ ಪೇದೆ ಎಂದು ತಿಳಿದು ಬಂದಿದೆ.  ಈ ಕುಡುಕ ಪೊಲೀಸ್'ನ ಕಾಟಕ್ಕೆ ಬಸ್ ಕಂಡಕ್ಟರ್ ಪುಲ್ ಸುಸ್ತಾಗಿದ್ದಾನೆ.